ಮುಖ್ಯಶಿಕ್ಷಕ ಶ್ರೀನಿವಾಸ್ ಅಮಾನತುಗೊಳಿಸಿ

30-DVD-1
ಮುಕ್ಕನಾಳ ಶಾಲೆ ಮುಖ್ಯಶಿಕ್ಷಕ ಶ್ರೀನಿವಾಸ್‌ರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ದೇವದುರ್ಗದಲ್ಲಿ ಶಿಕ್ಷಣ ಇಲಾಖೆ ವ್ಯವಸ್ಥಾಪಕ ನರೇಂದ್ರ ಬಾಬುಗೆ ಎಸ್‌ಎಫ್‌ಐ ಮುಖಂಡರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಕಾರ್ಯದರ್ಶಿ ಬಾಬುಮಿಯಾ, ಎಸ್ಡಿಎಂಸಿ ಅಧ್ಯಕ್ಷ ಸಿದ್ದಣ್ಣ ಪ್ರಮುಖರಾದ ನರಸಣ್ಣ ನಾಯಕ, ಶಬ್ಬೀರ್, ಮೌನೇಶ, ಹನುಮಂತ ಮಡಿವಾಳ ಇದ್ದರು.
Published on

ದೇವದುರ್ಗ: ತಾಲೂಕಿನ ಮುಕ್ಕನಾಳ ಸಉಹಿ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯಶಿಕ್ಷಕ ಶ್ರೀನಿವಾಸ್ ಕರ್ತವ್ಯಲೋಪ ಎಸಗಿದ್ದು, ಇವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಬಿಇಒ ಎಚ್.ಸುಖದೇವ್‌ಗೆ ಭಾರತ ವಿದ್ಯಾರ್ಥಿ ಫೆಡರೇಶನ್ ಮುಖಂಡರು ಶುಕ್ರವಾರ ಮನವಿ ಸಲ್ಲಿಸಿದರು.

ಶಾಲೆಯಲ್ಲಿ ಒಂದು ರಿಂದ 8ಏಂಟನೇ ತರಗತಿವರಿಗಿದೆ. ಅತಿಥಿ ಶಿಕ್ಷಕರೇ ಆಧಾರವಾಗಿದ್ದಾರೆ. ಪ್ರಭಾರ ಮುಖ್ಯಶಿಕ್ಷಕ ಶ್ರೀನಿವಾಸ್ ಇಂಗ್ಲಿಷ್ ಶಿಕ್ಷಕರಾಗಿದ್ದು, ಶಾಲೆಗೆ ಸರಿಯಾಗಿ ಬರುತ್ತಿಲ್ಲ. ಜತೆಗೆ ಇಂಗ್ಲಿಷ್ ಪಾಠ ಬೋಧನೆ ಮಾಡದೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ.

ಇದರಿಂದ ಮಕ್ಕಳ ಭವಿಷ್ಯ ಹಾಳಾಗುವ ಆತಂಕ ಪಾಲಕರನ್ನು ಕಾಡುತ್ತಿದೆ. ಈ ಹಿಂದೆ ಶ್ರೀನಿವಾಸ್ ವರ್ತನೆ ಖಂಡಿಸಿ ವಿದ್ಯಾರ್ಥಿಗಳು ಪಾಲಕರ ಜತೆ ಪ್ರತಿಭಟನೆ ಮಾಡಿದ್ದರು, ಈ ವೇಳೆ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅದರೆ, ಅಮಾನತು ಮಾಡದೆ ಹುಲಿಗುಡ್ಡ ಶಾಲೆಗೆ ವರ್ಗಾವಣೆ ಮಾಡಿದ್ದಾರೆ. ಶ್ರೀನಿವಾಸ್ ಊರಿನಲ್ಲಿ ತಮ್ಮ ಪರವಾಗಿ ಇನ್ನೊಂದು ಗುಂಪು ಕಟ್ಟಿಕೊಂಡು ಗ್ರಾಮದಲ್ಲಿ ಒಡಕು ಮೂಡಿಸುತ್ತಿದ್ದಾರೆ.

ಇವರನ್ನು ಸೇವೆಯಿಂದ ಅಮಾನತು ಮಾಡಿ, ಶಾಲೆಗೆ ಮುಖ್ಯಶಿಕ್ಷಕ ಸೇರಿ ಸಹಶಿಕ್ಷಕರನ್ನು ನೇಮಕ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಶಿಕ್ಷಣ ಇಲಾಖೆ ಕಚೇರಿ ಮುಂದೆ ಪಾಲಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಕಾರ್ಯದರ್ಶಿ ಬಾಬುಮಿಯಾ, ಎಸ್ಡಿಎಂಸಿ ಅಧ್ಯಕ್ಷ ಸಿದ್ದಣ್ಣ ಪ್ರಮುಖರಾದ ನರಸಣ್ಣ ನಾಯಕ, ಶಬ್ಬೀರ್, ಮೌನೇಶ, ಮಕ್ತಮ್‌ಪಾಷಾ, ಹನುಮಂತ ಮಡಿವಾಳ, ಬಸವರಾಜ ವಂದಲಿ, ರಂಗನಾಥ, ಮುಕ್ಕನಗೌಡ, ಹನುಮಂತ, ಮಹಿಮೂದ್, ಶಿವಕುಮಾರ, ಮಲ್ಲಯ್ಯ ಸುಣ್ಣದಕಲ್, ಮಾಳಪ್ಪ ಕೊಂಕಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net