'ಸಖನಿಲ್ಲದ ಸುಖವೆಲ್ಲಿದೆ? ಹಾಗಾಗಿ ಕುಮಾರಸ್ವಾಮಿ ಸಖನನ್ನು ಹುಡುಕುತ್ತಿದ್ದಾರೆ...'

HDK
HDK
Published on

ಮೈಸೂರು: ಸಖನಿಲ್ಲದ ಸುಖವೆಲ್ಲಿದೆ? ಹೀಗಾಗಿ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸಖನನ್ನು ಹುಡುಕುತ್ತಿದ್ದಾರೆ ಎಂದು ಎಂಎಲ್​ಸಿ ಎಚ್​.ವಿಶ್ವನಾಥ್​ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಎಚ್​.ಡಿ. ಕುಮಾರಸ್ವಾಮಿ ಆಗಾಗ್ಗೆ ಸಖರ ಹುಡುಕಾಟ ನಡೆಸುತ್ತಿರುತ್ತಾರೆ. ಅವರಿಗೆ ಯಾರು? ಯಾವಾಗ? ಸಖ ಆಗುತ್ತಾರೆ ಎಂಬುದು ಗೊತ್ತಿಲ್ಲ. ಸ್ಥಿರತೆ ಸದೃಢತೆಗಾಗಿ ಸಖರ ಹುಡುಕಾಟ ಇರುತ್ತದೆ. ಮುಂದೆ ಯಾರು ಅವರಿಗೆ ಸಖರಾಗುತ್ತಾರೋ ಎಂಬುದೂ ಗೊತ್ತಿಲ್ಲ ಎಂದು ಕಾಲೆಳೆದರು.

ಮಂಡ್ಯ ಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಜೆಡಿಎಸ್​ ಜತೆ ಬಿಜೆಪಿ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್​, ಕುಮಾರಸ್ವಾಮಿ ರಾಜಕೀಯ ಸ್ಥಿರತೆ ಮತ್ತು ಅಸ್ತಿತ್ವಕ್ಕಾಗಿ ಹುಡುಕಾಡುತ್ತಿದ್ದಾರೆ. ಅಸ್ತಿತ್ವಕ್ಕಾಗಿ ಯಾರಾದರೂ ಸಖ ಬೇಕಲ್ವ? ಎಂದು ಲೇವಡಿ ಮಾಡಿದರು.

ಮೈಸೂರಿನಲ್ಲೂ ಮಂಡ್ಯ ಮಾದರಿ ಬಿಜೆಪಿ-ಜೆಡಿಎಸ್​ ಮೈತ್ರಿ ಆಗಿದೆ. ಕೆ.ಆರ್.ನಗರ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಮೈತ್ರಿ ಪಡೆ ಮೇಲುಗೈ ಸಾಧಿಸಿದೆ. ಬಿಜೆಪಿಯ ಪ್ರಭಾಕರ್ ಜೈನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಜೆಡಿಎಸ್‌ನ ಮಹೇಶ್​ಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ಶಾಸಕ ಸಾ.ರಾ.ಮಹೇಶ್ ಮುಂದಾಳತ್ವದಲ್ಲಿ ಮೈತ್ರಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net