ಬಲವಂತದಿಂದ ಬಿಜೆಪಿ ಜತೆ ಮೈತ್ರಿಗೆ ದೇವೇಗೌಡರನ್ನು ಒಪ್ಪಿಸಲಾಗಿದೆ : ಸಚಿವರ ಸ್ಪೋಟಕ ಹೇಳಿಕೆ

ಕಲಬುರಗಿ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಬಲವಂತ ಮಾಡಿ ಒಪ್ಪಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ಮಗನ ಹಿಂಸೆಯಿAದ ತಾಳದೆ ಕೊನೆಗೆ ಮೈತ್ರಿಗೆ ದೇವೇಗೌಡರು ಒಪ್ಪಿಕೊಂಡಿz್ದÁರೆ. ಮಾಜಿ ಸಿಎಂ ಕುಮಾರಸ್ವಾಮಿ ನಡವಳಿಕೆಯಿಂದ ಈ ಸ್ಥಿತಿ ಬಂದಿದೆ  ಎಂದರು.
20231003_150409
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಬಲವಂತ ಮಾಡಿ ಒಪ್ಪಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ಮಗನ ಹಿಂಸೆಯಿAದ ತಾಳದೆ ಕೊನೆಗೆ ಮೈತ್ರಿಗೆ ದೇವೇಗೌಡರು ಒಪ್ಪಿಕೊಂಡಿz್ದÁರೆ. ಮಾಜಿ ಸಿಎಂ ಕುಮಾರಸ್ವಾಮಿ ನಡವಳಿಕೆಯಿಂದ ಈ ಸ್ಥಿತಿ ಬಂದಿದೆ  ಎಂದರು.
ಬಿಜೆಪಿಗೆ ಜೆಡಿಎಸ್, ಜೆಡಿಎಸ್‌ಗೆ ಬಿಜೆಪಿ  ಅವಶ್ಯಕತೆ ಇದೆ. ಯಾಕೆಂದರೆ ಇಬ್ಬರು ಮುಳುಗಿ ಹೋಗುವ  ಭಯದಲ್ಲಿz್ದÁರೆ. ಹೀಗಾಗಿ ಒಬ್ಬರ ಕೈ ಒಬ್ಬರು ಹಿಡಿಯುತ್ತಿz್ದÁರೆ. ಮುಳುಗಿದರೆ ಇಬ್ಬರು ಮುಳುತ್ತಾರೆ ಎಂದು ವ್ಯಾಖ್ಯಾನಿಸಿದರು.
ಮಾಜಿ ಸಚಿವರಾದ ಎಂಎಲ್‌ಸಿ  ಸಿ.ಪಿ.ಯೋಗೇಶ್ವರ ತನ್ನ ಹಣೆಬರಹವನ್ನು ಅವರಿಗೆ ಬರೆದುಕೊಳ್ಳಲು  ಆಗಲಿಲ್ಲ. ಅಂತಹ ವ್ಯಕ್ತಿ ಬೇರೆಯವರ ಹಣೆಬರಹ ಬರೆಯುತ್ತಾನಾ? ಸರ್ಕಾರ ಉರುಳಿಸುತ್ತಾನಾ ಎಂದು ಸಚಿವ ಚಲುವರಾಯಸ್ವಾಮಿ ಖಡಕ್ ಆಗಿ ಪ್ರಶ್ನಿಸಿದರು.
ಜನವರಿಯಲ್ಲಿ ಇಲ್ಲವೇ ಸಂಕ್ರಾತಿ ಹೊತ್ತಿಗೆ ಸರ್ಕಾರ ಉರಳುತ್ತೆ ಅನ್ನುವ ಎಂಎಲï ಸಿ ಯೋಗೇಶ್ವರ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಪ್ರಚಾರ ಮಾಡಿದರೂ ಸೋತಿz್ದÁನೆ. ಯೋಗೇಶ್ವರ, ಕುಮಾರಸ್ವಾಮಿಗೆ ಕಾಂಗ್ರೆಸ್ ಪಕ್ಷದ್ದಾಗಲಿ ಇಲ್ಲವೇ ಸರ್ಕಾರದ್ದಾಗಲಿ ಹಣೆಬರಹ ಬರೆಯಲು ಸಾಧ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net