

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜೈ ಭಾರತ ಮಾತಾ ಸೇವಾ ಸಮಿತಿಯ ಸಂಸ್ಥಾಪಕ ರಾಷ್ಟಿçÃಯ ಅಧ್ಯಕ್ಷರಾದ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ನಿರಗುಡಿ ಅವರ ೫೬ನೇ ಜನ್ಮ ದಿನಾಚರಣೆ ನಗರ ಸೇರಿದಂತೆ ಜಿಲ್ಲೆಯ ವವಿವಿಧೆಡೆ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಶನಿವಾರ ಆಚರಿಸಲಾಯಿತು.
ಮಳೆ- ಬೆಳೆ ಇಲ್ಲದಿರುವುದರಿಂದÀ ರೈತ ಸಂಕಷ್ಟದಲ್ಲಿರುವುದರಿAದ ಜನ್ಮ ದಿನಾಚರಣೆ ಬೇಡ ಎಂದು ಪೂಜ್ಯರು ಹೇಳಿದ್ದರಿಂದ ಭಕ್ತರು ಸರಳವಾಗಿ ಆಚರಿಸಿದರು.
ಸಮಿತಿಯ ಆಳಂದ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಬಿರಾದಾರ ನೇತೃತ್ವದಲ್ಲಿ ಆಳಂದ ಹೊರವಲಯದಲ್ಲಿರುವ ಅಲೆಮಾರಿ ಜನಾಂಗದವರಿಗೆ ಆಹಾರ ಸಾಮಗ್ರಿಗಳ ಕಿಟ್, ಬೆಡ್‌ಶಿಟ್, ಹೊದಿಕೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.
ಆಳಂದ ಚೆಕ್ ಪೊಸ್ಟ್ ಬಳಿಯಿರುವ ಪೂಜ್ಯ ಹವಾ ಮಲ್ಲಿನಾಥ ಮಹಾರಾಜರ ನಿರಂತರ ಅನ್ನದಾಸೋಹ ಕೇಂದ್ರದಲ್ಲಿ ಪರಮ ಪೂಜ್ಯರ ೫೬ ನೇ ವರ್ಷದ ಜನ್ಮ ದಿನೋತ್ಸವ ಆಚರಿಸಲಾಯಿತು.
ಜೈ ಭಾರತ ಮಾತಾ ಸೇವಾ ಸಮಿತಿ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಸಂದೇಶ ಪವಾರ ನೇತೃತ್ವದಲ್ಲಿ ಕಲಬುರಗಿ ಹೊರವಲಯದಲ್ಲಿ ವಾಸವಾಗಿರುವ ಅಲೆಮಾರಿಗಳಿಗೆ ಶಾಶ್ವತವಾಗಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡುವ ಪೂಜ್ಯರ ಜನ್ಮ ದಿನ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸೈನಿಕರಿಗೆ- ರೈತರಿಗೆ ಸನ್ಮಾನ
ಕಲಬುರಗಿ ನಗರದ ಹೀರಾಪುರ ಬಳಿಯ ಗಣೇಶಲಿಂಗ ಹವಾ ಮಲ್ಲಿನಾಥ ಆಶ್ರಮದಲ್ಲಿ ಸೈನಿಕರು, ರೈತರಿಗೆ, ವೈದ್ಯರು ಸೇರಿ ಇತರ ಸಾಮಾಜಿಕ ಸೇವಾ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು. ಅಲ್ಲದೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾವಿರಾರು ಜನರು ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು. ಕಾರ್ಮಿಕರಿಗೆ ಪ್ರಧಾನಮಂತ್ರಿ ವಿಮಾ ಪರಿಹಾರ ಯೋಜನೆಯಡಿ ಐವರು ಕಾರ್ಮಿಕ ಕುಟುಂಬಗಳಿಗೆ ತಲಾ ೫ಲಕ್ಷ ರೂ ಪರಿಹಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾದನಹಿಪ್ಪರಗಾದ ಅಭಿನವ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿ, ಚಿನ್ಮಯಗಿರಿ ಮಹಾಂತಪುರದ ವೀರ ಮಹಾಂತ ಶಿವಾಚಾರ್ಯರು, ಜೈ ಭಾರತ ಮಾತಾ ಸೇವಾ ಸಮಿತಿಯ ವಕ್ತಾರ ವೈಜನಾಥ ಝಳಕಿ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಧುತ್ತರಗಾಂವದ ಮಾತೋಶ್ರೀ ಲಕ್ಷಿö್ಮÃ ದೇವಿ, ಮುಖಂಡರಾದ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಸಂತೋಷ ಬಿಲಗುಂದಿ, ಶರಣಬಸಪ್ಪ ಹೀರಾ, ವಿಜಯವಾಣಿ ಸ್ಥಾನಿಕ ಸಂಪಾದಕ ಸದಾನಂದ ಜೋಶಿ, ಸಮಿತಿಯ ಪ್ರಮುಖರಾದ ಸಂದೇಶ ಪವಾರ, ಮಂಜುನಾಥ ಬಿರಾದಾರ, ರಾಜಶೇಖರ ರೆಡ್ಡಿ ಮೊದಲಾದವರಿದ್ದರು.