

ಕಲಬುರಗಿ: ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಶ್ರೀಶೈಲದಲ್ಲಿ ಭಾನುವಾರ ಆಯೋಜಿಸಿರುವ ಸಿಡಿಲ ಸಂತ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ನಿಮಿತ್ತ ಶ್ರೀ ಹವಾ ಮಲ್ಲಿನಾಥ ಮಹಾರಾಜ ನೇತೃತ್ವದಲ್ಲಿ ನೂರಾರು ಜನರು ಶನಿವಾರ ಸ್ವಾತಂತ್ರÈ ಹೋರಾಟಗಾರರು, ಮಹಾತ್ಮರ ಭಾವಚಿತ್ರಗಳ ಮೆರವಣಿಗೆಯೊಂದಿಗೆ ಶ್ರೀಶೈಲಕ್ಕೆ ಯಾತ್ರೆ ಹೊರಟರು. ಆಳಂದ ತಾಲೂಕಿನ ಲಾಡಚಿಂಚೋಳಿ ಬಳಿಯ ಭಾರತ ಮಾತಾ ಮಂದಿರದಿAದ ಶನಿವಾರ ಬೆಳಗ್ಗೆ ಹೊರಡುವ ಮೆರವಣಿಗೆ ಕಲಬುರಗಿ ಮಾರ್ಗವಾಗಿ ಭಾನುವಾರ ಶ್ರೀಶೈಲ ತಲುಪಲಿದೆ. ಬೆಳಗ್ಗೆ ೧೧ಕ್ಕೆ ಸ್ವಾಮಿ ವಿವೇಕಾನಂದ ಜಯಂತಿ ನಡೆಯಲಿದೆ ಎಂದು ಸಮಿತಿ ರಾಷ್ಟಿçÃಯ ವಕ್ತಾರ ವೈಜನಾಥ ಝಳಕಿ ತಿಳಿಸಿದ್ದಾರೆ. ಯಾತ್ರೆ ಮಾರ್ಗದುದ್ದಕ್ಕೂ ಭಕ್ತರು ಪೂಜ್ಯರಿಗೆ ಪುಷ್ಪಾರ್ಚನೆ ಮಾಡಿ ಶುಭ ಕೋರಿದರು.