ಏಳು ಜನರಿಗೆ ಹವ್ಯಕ ಮಹಾಸಭಾ ಪ್ರಶಸ್ತಿ

tmp_pic_1680029659233Polish_20230329_001527334
Published on

ಕಾರವಾರ: ಅಖಿಲ ಹವ್ಯಕ ಮಹಾಸಭೆಯು ನೀಡುವ 2022-23 ನೇ ಸಾಲಿನ ಹವ್ಯಕ ವಿಶೇಷ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಏಪ್ರಿಲ್ 2 ರಂದು ಸಾಯಂಕಾಲ 4 ಗಂಟೆಗೆ  ಬೆಂಗಳೂರು ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.‌ ಅಂದು 80 ನೆಯ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮವೂ ಇರಲಿದೆ.

ತೆಂಕುತಿಟ್ಟು ಯಕ್ಷಗಾನ ಪೆರುವೋಡಿ ನಾರಾಯಣ ಭಟ್‌ ಅವರಿಗೆ ಹವ್ಯಕ ವಿಭೂಷಣ, ಇತಿಹಾಸಕಾರ ಶಿರಸಿಯ ಡಾ. ಲಕ್ಷ್ಮೀಶ್ ಸೋಂದಾ ಹಾಗೂ ಸಂಗೀತ ಸಂಘಟಕ, ಹೊನ್ನಾವರದ ಜಿ. ಎಸ್. ಹೆಗಡೆ ಸಪ್ತಕ ಅವರಿಗೆ, ಹವ್ಯಕ ಭೂಷಣ, ವೈದ್ಯಕೀಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಡಾ. ಕಿಶನ್ ಭಾಗವತ್ , ಭಾರತೀಯ ಭೂ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ ವಿವೇಕ್ ಸಾಯ, ಕ್ರೀಡಾ ಕ್ಷೇತ್ರಕ್ಕೆ ಅರ್ಪಿತಾ. ವಿ. ಎಂ ಅವರಿಗೆ ಹವ್ಯಕಶ್ರೀ, ಹವ್ಯಕ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕ ನಾರಾಯಣ ಶಾನಭಾಗ ಅವರಿಗೆ ಹವ್ಯಕ ಸೇವಾ ಶ್ರೀ ಪ್ರಶಸ್ತಿ ನೀಡಲಾಗಿಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net