ಮಳೆ-ಗಾಳಿಗೆ ಗಡಿ ತಾಲೂಕು ಚಿಂಚೋಳಿ ತತ್ತರ

01klb Chincholi 01
Published on

ನೂರಾರು ಮನೆಗಳಿಗೆ ನೀರು | ತುಂಬಿ ಹರಿಯುತ್ತಿರುವ ಭೋಗಾವತಿ, ಹಳ್ಳ-ಕೊಳ್ಳಗಳು

ವಿಜಯವಾಣಿ ಸುದ್ದಿಜಾಲ ಚಿಂಚೋಳಿ
ಗಾಳಿಯೊAದಿಗೆ ಸುರಿದ ರಣಭೀಕರ ಮಳೆಯಿಂದಾಗಿ ತಾಲೂಕು ಬಹುತೇಕ ಜಲಾವೃತಗೊಂಡಿದ್ದು, ನದಿ ಮತ್ತು ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಕೆಲವೆಡೆ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಚAದ್ರAಪಳ್ಳಿ, ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಭೋಗಾವತಿ ನದಿಗೆ ನೀರು ಹರಿಬಿಡಲಾಗಿದೆ. ಇತ್ತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಭೋಗಾವತಿ ತುಂಬಿ ಹರಿಯುತ್ತಿದ್ದು, ಹೊಸಳ್ಳಿ-ದೇಗಲಮಡಿ, ಅಣವಾರ-ಗಂಗನಪಳ್ಳಿ, ಪೋಲಕಪಳ್ಳಿ-ಅಣವಾರ, ಇರಕಪಳ್ಳಿ-ಬುರಗಪಳ್ಳಿ, ಗರಗಪಳ್ಳಿ-ಭಕ್ತಂಪಳ್ಳಿ ಸೇತುವೆಗಳು ಮುಳುಗಿದ್ದರಿಂದ ಸಂಚಾರ ಕಡಿತಗೊಂಡಿದ್ದು, ಗ್ರಾಮಸ್ಥರು ಹಳ್ಳಿಗಳಲ್ಲೇ ಬಂಧಿಯಾಗಿದ್ದಾರೆ.
ಗAಗನಪಳ್ಳಿ-ಅಣವಾರ ಸೇತುವೆ ಮುಳುಗಡೆಯೊಂದಿಗೆ ಐತಿಹಾಸಿಕ ಗಂಗಾಮಾತೆ ದೇಗುಲ ಜಲಾವೃತವಾಗಿದೆ. ಈಜು ಬರುವವನಿಂದ ದೇಗುಲದ ಕಳಶ ರಕ್ಷಣೆ ಮಾಡಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಣವಾರದ ಸಂಗಯ್ಯ ಸ್ವಾಮಿ ತಿಳಿಸಿದ್ದಾರೆ.
ಬೆನಕನಹಳ್ಳಿಗೆ ಹಳ್ಳದ ನೀರು ನುಗ್ಗಿದ್ದು, ಬಹುತೇಕ ಮನೆಗಳಲ್ಲಿನ ದವಸ-ಧಾನ್ಯ ನೀರುಪಾಲಾಗಿದೆ. ಸಾಕಷ್ಟು ಯಂತ್ರಗಳು ಕೆಟ್ಟು ಹೋಗಿವೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ಸೇಡಂ ಮತಕ್ಷೇತ್ರಕ್ಕೆ ಒಳಪಡುವ ಈ ಗ್ರಾಮಸ್ಥರು ಶಾಶ್ವತ ಪರಿಹಾರ ಕಲ್ಪಿಸುವಂತೆ ಕೋರಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ಮಲ್ಲು ರಾಯಪ್ಪಗೊಂಡ ಕಿಡಿಕಾರುತ್ತಾರೆ.
ಅವಳಿ ಪಟ್ಟಣದ ಬಡಿದರ್ಗಾ, ಛೋಟಿ ದರ್ಗಾ, ಜೈಭೀಮ ನಗರ, ಪಟೇಲ್ ಕಾಲನಿ, ಆಶ್ರಯ ಕಾಲನಿ ಮನೆಗಳಿಗೆ ಮಳೆ ಮತ್ತು ನದಿ ನೀರು ಹೊಕ್ಕಿದ್ದು, ಚರಂಡಿಗಳು ತುಂಬಿ ಹರಿಯುತ್ತಿವೆ. ಪಟೇಲ್ ಕಾಲನಿಯ ಲಕ್ಷö್ಮಣ ಆವಂಟಿ, ಬಸವ ನಗರದ ಸುಭಾಷ ಸೀಳಿನ್ ಮನೆ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಸಂಚಾರ ಮಾಡದಂಥ ಸ್ಥಿತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net