

ಹಾವೇರಿ: ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಯುವಕರ ಶ್ರಮ ವ್ಯರ್ಥವಾಗಿದೆ. ಜೆಸಿಬಿ ಕಾಮಗಾರಿ ವೇಳೆ ಗಾಯಗೊಂಡ ಹಾವು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ದಯಾನಂದ ಜನ್ನು ಪೆಟ್ರೋಲ್ ಬಂಕ್ ನಲ್ಲಿ ಜೆಸಿಬಿಯಿಂದ ಕಾಮಗಾರಿ ನೆಡೆಯುತ್ತಿತ್ತು. ಈ ವೇಳೆ ಜೆಸಿಬಿ ಬಕೆಟ್ಗೆ ಸಿಲುಕಿ ಹಾವಿನ ಸೊಂಟದ ಬೋನ್ ಮುರಿದು ತೀವ್ರವಾದ ಗಾಯವಾಗಿತ್ತು. ತಕ್ಷಣವೆ ಗಾಯಗೊಂಡ ನಾಗರಹಾವನ್ನು ಯುವಕರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ಹಾವಿಗೆ ಸುಮಾರು ಹತ್ತಕ್ಕೂ ಅಧಿಕ ಸ್ವಿಚ್ ಹಾಕಿಸಲಾಗಿತ್ತು. ಸ್ವಲ್ಪ ಹೊತ್ತು ಆರಾಮಾಗಿ ಹೆಡೆ ಎತ್ತಿ ಆಟವಾಡಿದ ನಾಗರಾಜ ನಂತರ ಸಾವನ್ನಪ್ಪಿದೆ. ನಮ್ಮ ಪ್ರಯತ್ನ ಪ್ರಯತ್ನ ಕೊನೆಗೂ ಫಲಿಸಲಿಲ್ಲ ಎಂದು ಸ್ಥಳೀಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)