ವ್ಯಾಧಿ ಬೂದಿ ಆದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್..!

Karnika
Published on

ಹಾವೇರಿ: ಇಲ್ಲಿನ ರಾಣೇಬೆನ್ನೂರು ತಾಲೂಕಿನ ಸುಪ್ರಸಿದ್ಧ ದೇವರಗುಡ್ಡ ಮಾಲತೇಶ ದೇವಸ್ಥಾನದ ಕಾರ್ಣಿಕೋತ್ಸವ ಶನಿವಾರ ನಡೆಯಿತು.

ಈ ವೇಳೆ "ವ್ಯಾಧಿ ಬೂದಿ ಆದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್" ಎಂದು ನಾಗಪ್ಪಜ್ಜ ಗೊರವಯ್ಯ ವರ್ಷದ ಕಾರ್ಣಿಕ ಭವಿಷ್ಯ ನುಡಿದರು.

15-20 ಅಡಿ ಎತ್ತರದ ಬಿಲ್ಲನ್ನು ಏರಿದ ನಾಗಪ್ಪಜ್ಜ ಗೊರವಯ್ಯ ವ್ಯಾಧಿ ಬೂದಿ ಆದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್ ಎಂದು ಹೇಳಿದ ಭವಿಷ್ಯವಾಣಿಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ಟ್ ವಿಶ್ಲೇಷಣೆ ಮಾಡಿದ್ದಾರೆ.

ಕಾರ್ಣಿಕ ಭವಿಷ್ಯದ ಪ್ರಕಾರ ಈ ಬಾರಿ ಬೆಳೆದ ಯಾವ ಬೆಳೆಯು ರೈತನಿಗೆ ಸಿಗುವುದಿಲ್ಲ. ಕೈಗೆ ಬಂದಿದ್ದು ಬಾಯಿಗೆ ಬರುವುದಿಲ್ಲ. ಅವನು (ರೈತ) ಬೆಳೆದ ಬೆಳೆಗಳು ಹಾಳಾಗ್ತಾವೆ. ಆದರೆ ಮುಂದಿನ ದಿನಗಳಲ್ಲಿ ಹಾಳಾಗಿದ್ದು, ಸರಿ ಹೋಗುತ್ತದೆ. ನಷ್ಟ ಆಗಿದ್ದಕ್ಕೆ ಮುಂದೆ ಭಗವಂತ ರೈತನಿಗೆ ಸಿರಿ ಸಂಪತ್ತು ನೀಡುತ್ತಾನೆಂದು ಅರ್ಥೈಸಲಾಗಿದೆ.

ಇದು ರೈತ ವರ್ಗಕ್ಕೆಂದೆ ನುಡಿಯುವ ಭವಷ್ಯವಾಣಿ ಎಂದು ಪ್ರಧಾನ ಅರ್ಚಕರು ವಿಶ್ಲೇಷಣೆ ಮಾಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net