

ಹಾವೇರಿ: ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿರೆಕೇರೂರು ಪಟ್ಟಣದ ಹೊರವಲಯದಲ್ಲಿರುವ ದುರ್ಗಾದೇವಿ ಕೆರೆಯಲ್ಲಿ ನಡೆದಿದೆ.
ಶಿವಕ್ಕ ಮಲ್ಲೇಶಪ್ಪ ದೊಡ್ಡಮನಿ (36) ಮತ್ತು ಸಂಗೀತಾ ದೊಡ್ಡಮನಿ (16) ಮೃತ ದುರ್ದೈವಿಗಳು. ಒಬ್ಬರಿಗೊಬ್ಬರು ಬಟ್ಟೆಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ರಟ್ಟಿಹಳ್ಳಿ ತಾಲೂಕಿನ ಕೆಂಚಾಯಿಕೊಪ್ಪ ತಾಂಡಾ ಗ್ರಾಮದ ನಿವಾಸಿಗಳು.
ಎರಡು ದಿನಗಳ ಹಿಂದೆ ಮನೆಯಿಂದ ಬಂದಿದ್ದ ತಾಯಿ-ಮಗಳು ದೇವಸ್ಥಾನದ ಕೆರೆಯ ಬಳಿ ಸುತ್ತಾಡುತ್ತಿದ್ದರೆಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ಕಾರಣವಿನ್ನು ತಿಳಿದುಬಂದಿಲ್ಲ. ಪತ್ತೆ ಹಚ್ಚುವ ಕೆಲಸದಲ್ಲಿ ಪೋಲಿಸರು ತೊಡಗಿಕೊಂಡಿದ್ದಾರೆ.
ಘಟನಾ ಸ್ಥಳವನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿರುವ ಹಿರೆಕೇರೂರು ಪೋಲಿಸರು ಮೃತ ಶಿವಕ್ಕ ಎಂಬಾಕೆಯ ಗಂಡ ಮತ್ತು ಸಂಬಂಧಿಕರನ್ನು ಕರೆಯಿಸಿ ವಿಚಾರಣೆ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)