ಹಾವೇರಿ: ಫೇಸ್​ಬುಕ್ ಯುವತಿ ನಂಬಿ ಬರೋಬ್ಬರಿ 30 ಲಕ್ಷ ರೂ. ಕಳೆದುಕೊಂಡ ಯೋಗ ಶಿಕ್ಷಕ!

face
Published on

ಹಾವೇರಿ: ಫೇಸ್​ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಬ್ಯುಸಿನೆಸ್ ಮಾಡುವ ನೆಪದಲ್ಲಿ ಯೋಗ ಶಿಕ್ಷಕರೊಬ್ಬರಿಗೆ ಬರೋಬ್ಬರಿ 30 ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದ ಮುತ್ತಪ್ಪ ಯಲ್ಲಪ್ಪ ಉಮಚಗಿ (34) ಮೋಸ ಹೋದವರು.

ಇವರು ಯೋಗ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಕ್ಯೂರಿ ಎನ್ನುವ ಯುವತಿ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದಾಳೆ. ಯುಕೆಯಲ್ಲಿರುವ ನಮ್ಮ ಬ್ಯೂರಿಕ್ ಗೋಲ್ಡ್ ಕ್ಯಾಪಿಟಲ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಇಬ್ಬರು ಕಂಪನಿಗೆ ಮಾಲೀಕರಾಗಿ ಬಂದ ಲಾಭವನ್ನು ಹಂಚಿಕೊಳ್ಳಬಹುದು ಎಂದು ನಂಬಿಸಿದ್ದಾಳೆ. ನಂತರ ಮುತ್ತಪ್ಪ ಅವರಿಂದ 30 ಲಕ್ಷ ರೂ. ಆಕೆಯ ವಿವಿಧ ಖಾತೆಗಳಿಗೆ ಹಾಕಿಸಿಕೊಂಡು ಮೋಸ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net