ತಿರುಪತಿ ಹಾಥಿರಾಮ್ ಮಠ ಧ್ವಂಸ ಬೇಡ

Published on

ಬಾಬುರಾವ್ ಚವ್ಹಾಣ್ ಆಗ್ರಹ | ಆಂಧ್ರ ಸರ್ಕಾರಕ್ಕೆ ಮನವಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ತಿರುಪತಿಯಲ್ಲಿನ ಪುರಾತನ ಹಾಥಿರಾಮ್ ಬಾವಾಜಿ ಮಠವನ್ನು ಆಂಧ್ರಪ್ರದೇಶ ಸರ್ಕಾರ ಧ್ವಂಸಗೊಳಿಸಲು ಮುಂದಾಗಿದ್ದು, ಕೂಡಲೇ ಅದನ್ನು ನಿಲ್ಲಿಸಬೇಕು. ಪುನಃರುಜ್ಜೀವನಗೊಳಿಸಬೇಕು ಎಂದು ಉತ್ತರ ಕರ್ನಾಟಕ ಶ್ರೀ ಹಾಥಿರಾಮ್ ಬಾವಾಜಿ ಮಹಾ ಸಂಘದ ಮುಖಂಡ ಬಾಬುರಾವ್ ಚವ್ಹಾಣ್, ಗೋಪಿನಾಥ ರಾಠೋಡ್ ಆಗ್ರಹಿಸಿದರು.

ಹಾಥಿರಾಮ್ ಬಾವಾಜಿ ಮಠ ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ನಿರ್ಮಿಸಿದ್ದು, ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೂ, ಶ್ರೀ ಮಠಕ್ಕೂ ಅವಿನಾಭಾವ ಸಂಬAಧವಿದೆ. ಇಂತಹ ಪುರಾತನ ಐತಿಹಾಸಿಕ ಮಠವನ್ನು ನೆಲಸಮಗೊಳಿಸುವ ನಿರ್ಧಾರವನ್ನು ಆಂಧ್ರಪ್ರದೇಶ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮಠವು ತಿರುಪತಿ ದೇವಾಲಯದ ಪ್ರಮುಖ ಮೂಲ ಮಠಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ಆದ್ದರಿಂದ ಮಠವನ್ನು ನೆಲಸಮಗೊಳಿಸುವ ಬದಲು, ಸಂರಕ್ಷಿಸಿ ಜೀರ್ಣೋದ್ಧಾರ ಮಾಡಬೇಕು. ದೇಶಾದ್ಯಂತ ಇರುವ ಹಾಥಿರಾಮ್ ಮಹಾರಾಜರ ಮಠದ ಆಸ್ತಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಆ.೨೩ರಂದು ಸಮಾಜದ ಎಲ್ಲ ಮುಖಂಡರು ಸೇರಿ ನಿಯೋಗದೊಂದಿಗೆ ತೆರಳಿ ಆಂಧ್ರಪ್ರದೇಶ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಗೋಪಿನಾಥ ರಾಠೋಡ್, ಮಧನ್ ರಾಠೋಡ್, ಹಿರಾಕಂಠ ರಾಠೋಡ್, ಸಚಿನ ಚವ್ಹಾಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net