ಬೇಲೂರು ಗುಡುಗು ಸಹಿತ ಧಾರಾಕಾರ ಮಳೆ

ಚರಂಡಿಗಳೆಲ್ಲ ತುಂಬಿ ಹರಿದು ಅವ್ಯವಸ್ಥೆ
ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹರ್ಡಿಕರ್ ವೃತ್ತದ ಆಟೋ ನಿಲ್ದಾಣದಲ್ಲಿ ನೀರು ನಿಂತು ಕೆರೆಯಂತಾಗಿತ್ತು.
ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹರ್ಡಿಕರ್ ವೃತ್ತದ ಆಟೋ ನಿಲ್ದಾಣದಲ್ಲಿ ನೀರು ನಿಂತು ಕೆರೆಯಂತಾಗಿತ್ತು.
Published on: 

ಬೇಲೂರು: ಬಿಸಿಲ ಬೇಗೆಯಲ್ಲಿ ಬೆಂದಿದ್ದ ಬೇಲೂರು ಪಟ್ಟಣದ ಜನರಿಗೆ ಬುಧವಾರ ಸುರಿದ ಗುಡುಗು ಸಹಿತ ಧಾರಾಕಾರ ಮಳೆಯಿಂದಾಗಿ ತಂಪೆರೆದಂತಾಯಿತು. ಪಟ್ಟಣದ ಹಲವೆಡೆ ಮಳೆ ನೀರಿನಿಂದಾಗಿ ಚರಂಡಿಗಳೆಲ್ಲ ತುಂಬಿ ರಸ್ತೆ ಮೇಲೆಯೇ ನೀರು ಹರಿದಿದ್ದರಿಂದ ವಾಹನಗಳ ಸವಾರರು, ಸಾರ್ವಜನಿಕರು ಓಡಾಡಲು ಕೆಲ ಸಮಯ ಪರದಾಡುವಂತಾಯಿತು. ಪಟ್ಟಣದ ಹರ್ಡಿಕರ್ ವೃತ್ತದ ಮುಂಭಾಗದ ಇಂದಿರಾ ಕ್ಯಾಂಟೀನ್ ಸಮೀಪದ ಆಟೋ ನಿಲ್ದಾಣದಲ್ಲಿ ನೀರು ನಿಂತು ಕೆರೆಯಂತಾಗಿತ್ತು. ಬಳಿಕ ನೀರು ಹೊಳೆಬೀದಿಯ ಮೂಲಕ ಹೊಳೆ ಸೇರಿತು. ಇದಕ್ಕೆ ಪ್ರಮುಖವಾಗಿ ರಸ್ತೆ ಮತ್ತು ಚರಂಡಿಗಳ ಅವೈಜ್ಞಾನಿಕ ನಿರ್ಮಾಣವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net