ಸೇವೆ ಮಾಡಲು ಶ್ರೀಮಂತಿಕೆಯೇ ಬೇಕಿಲ್ಲ

ಹಾಸನಾಂಬ ಕಲಾಕ್ಷೇತ್ರದಲ್ಲಿ ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನದ ಉಚಿತ ಸಂಚಾರಿ ಆಸ್ಪತ್ರೆ ಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ,  ಶ್ರೀ ಸೋಮಶೇಖರ ಸ್ವಾಮೀಜಿ,  ಶಾಸಕ ಎಚ್.ಕೆ.ಸುರೇಶ್, ಡಿಸಿ ಕೆ.ಎಸ್.ಲತಾಕುಮಾರಿ ಇತರರಿದ್ದರು.
ಹಾಸನಾಂಬ ಕಲಾಕ್ಷೇತ್ರದಲ್ಲಿ ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನದ ಉಚಿತ ಸಂಚಾರಿ ಆಸ್ಪತ್ರೆ ಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸೋಮಶೇಖರ ಸ್ವಾಮೀಜಿ, ಶಾಸಕ ಎಚ್.ಕೆ.ಸುರೇಶ್, ಡಿಸಿ ಕೆ.ಎಸ್.ಲತಾಕುಮಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೇವೆ ಮಾಡಲು ಶ್ರೀಮಂತಿಕೆಯೇ ಬೇಕಿಲ್ಲ
  • ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ
  • ಉಚಿತ ಸಂಚಾರಿ ಆಸ್ಪತ್ರೆ ಉದ್ಘಾಟನೆ
ಹಾಸನ: ಸೇವೆ ಮಾಡಲು ಶ್ರೀಮಂತಿಕೆಯೇ ಬೇಕಿಲ್ಲ. ನೆರವಾಗುವ ಕನಸು, ಇಷ್ಟಭಾವನೆ ಹಾಗು ಒಳ್ಳೆಯ ಉದ್ದೇಶವಿದ್ದರೆ ಭಗವಂತ ನಮಗೆ ಸಹಾಯ ಮಾಡಿಸುತ್ತಾನೆ. ಸದುದ್ದೇಶಕ್ಕೆ ದಾರಿಗಳು ಸಾಕಷ್ಟಿವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುವಾರ ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನದ ಉಚಿತ ಸಂಚಾರಿ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮಹಾಲಕ್ಷ್ಮೀ ಮಂಜಪ್ಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯವರು ಗ್ರಾಮೀಣ ಜನರಿಗೆ ಅನುಕೂಲವಾಗಲೆಂದು ನೀಡಿದ ಉಚಿತ ಸಂಚಾರಿ ಆರೋಗ್ಯ ವಾಹನ ನೀಡಿದ್ದಾರೆ. ಸಾಮಾನ್ಯರು ಸಹ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬಹುದು. ಅದಕ್ಕೆ ಶ್ರೀಮಂತಿಕೆ ಬೇಕಿಲ್ಲ, ಮನಸ್ಸಿದ್ದರೆ ಅವಕಾಶಗಳು ಸೃಷ್ಟಿಯಾಗುತ್ತವೆಂದರು.
ಮಕ್ಕಳ ಭಾಷೆಯಲ್ಲಿ ಸಮಾಜ ಮಾತನಾಡುವಂತಾಗಬೇಕು. ಭಾಷೆ ಎಂದರೆ ಕನ್ನಡ, ಇಂಗ್ಲಿಷ್, ಹಿಂದಿಯಲ್ಲ. ಭಾವನೆಗಳು ಒಂದಾಗುವ ಭಾಷೆ ಬೇರೆ. ಹಾಗಾದರೆ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆಂದರು.
ಇತರರಿಗೆ ಒಳಿತು ಮಾಡುವ ಗುರಿಯನ್ನು ನಾವು ಹಾಕಿಕೊಳ್ಳಬೇಕು. ಮಾನವ ಕಲ್ಯಾಣಕ್ಕೆ ಉಪಯೋಗವಾಗುವ ಅಭಿಪ್ಸೆ ನಮದಾಗಿರಬೇಕು. ಜನರ ಮೊಗದಲ್ಲಿ ಮಾಸಿರುವ ನಗುವನ್ನು ಪುನಃ ತರುವ ಉದ್ದೇಶ ಎಲ್ಲರದ್ದಾಗಿರಬೇಕೆಂದರು.
ಆಲ್ ಕೆಮೆಸ್ಟ್ ಎಂಬ ಕಾದಂಬರಿಯಲ್ಲಿ ಉಲ್ಲೇಖವಾಗಿರುವಂತೆ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಬಯಸಿದರೆ ತೀಕ್ಷ್ಣತೆಯ ಸ್ಥಿತಿಯನ್ನು ನೋಡಿ ಅಸ್ತಿತ್ವವೇ ಯಾವುದಾದರೂ ರೂಪದಲ್ಲಿ ಸಹಾಯ ಮಾಡುತ್ತದೆಂದರು.
ಸಾನ್ನಿಧ್ಯ ವಹಿಸಿದ್ದ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ, ಪುಷ್ಪಗಿರಿ ಮಠವು ಪ್ರತಿವರ್ಷ ಏನಾದರೊಂದು ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ಮಹಾಲಕ್ಷ್ಮೀ ಮಂಜಪ್ಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯವರು ಸಂಚಾರಿ ವಾಹನ ಕಲ್ಪಿಸಿರುವುದು ಹೆಮೆಯ ವಿಷಯವಾಗಿದೆ. ಜೂನ್ 15ರಿಂದ ವಾಹನ ಹಳ್ಳಿಗಳಿಗೆ ತೆರಳಲಿದ್ದು, ಆರಂಭಿಕವಾಗಿ 8 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಬೇಲೂರು ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಪುಷ್ಪಗಿರಿ ಮಠ ಆರೋಗ್ಯ, ಶಿಕ್ಷಣ ಹಾಗು ಕೃಷಿ ಕ್ಷೇತ್ರದ ಏಳಿಗೆ ಹಲವಾರು ಕಾರ್ಯಕ್ರಮ ಹಮಿಕೊಂಡಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಿರುವುದು ಖುಷಿಯ ವಿಚಾರ. ಬೇರೆ ಬೇರೆ ಮಠಾಧಿಪತಿಗಳು ಒಟ್ಟಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದರೆ ಬಡವರಿಗೆ ಅನುಕೂಲವಾಗುತ್ತದೆಂದರು.
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿದರು. ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಮಹಾಲಕ್ಷ್ಮೀ ಮಂಜಪ್ಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಉಮೇಶ್, ರಚನಾ, ಮನುಕುಮಾರ್, ಕರ್ನಾಟಕ ಕಾಫಿ ಕಾರ್ಪೋರೇಷನ್ ಯೋಜನೆ ಸಂಯೋಜಕ ಯೋಗಾನಂದ ಜಾನೆಕೆರೆ, ಕಟ್ಟಾಯ ಶಿವಕುಮಾರ್, ಮಮತಾ ಪಾಟೀಲ್, ಎಚ್.ಬಿ.ಮದನಗೌಡ ಇತರರಿದ್ದರು.
25 ಕೋಟಿ ರೂ. ಅನುದಾನ:
ಸಾಲುಮರದ ತಿಮಕ್ಕ ಅವರು ಹಳೇಬೀಡು ಪುಷ್ಪಗಿರಿ ಮಠದಲ್ಲಿ ವಾಸ್ತವ್ಯ ಹೂಡಿದ್ದರು ಎಂಬ ವಿಚಾರವನ್ನು ಜಿಲ್ಲಾಧಿಕಾರಿಗೆ ತಿಳಿಸಿದಾಗ ಅವರ ಸರಣಾರ್ಥ ಸಾರಕ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದಾರೆ. 10 ಎಕರೆ ಜಾಗವನ್ನು ಅದಕ್ಕಾಗಿ ಮೀಸಲಿಟ್ಟಿದ್ದು 25 ಕೋಟಿ ರೂ. ಅನುದಾನ ಕೊಡಲು ಒಪ್ಪಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ಸಹ ಚರ್ಚಿಸಿದ್ದಾರೆ. ಹಳೇಬೀಡಿನಲ್ಲಿ ಗೋಶಾಲೆ ಆರಂಭಿಸಿದ್ದು ಪಶು ಸಂಗೋಪನಾ ಇಲಾಖೆಯು ಅದನ್ನು ಮಠದ ಸಂಸ್ಥೆಗೆ ಹಸ್ತಾಂತರಿಸಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕ್ರಮ ವಹಿಸಬೇಕೆಂದು ಶ್ರೀ ಸೋಮಶೇಖರ ಸ್ವಾಮೀಜಿ ಕೋರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net