ಯೋಗದಿಂದ ದೇಹ, ಮನಸ್ಸಿನ ನಿಯಂತ್ರಣ ಸಾಧ್ಯ

ಸನದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಕ್ಕಳು ಯೋಗಾಭ್ಯಾಸ ಮಾಡಿದರು.
ಸನದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಕ್ಕಳು ಯೋಗಾಭ್ಯಾಸ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಯೋಗದಿಂದ ದೇಹ, ಮನಸ್ಸಿನ ನಿಯಂತ್ರಣ ಸಾಧ್ಯ
  • ಟೈಮ್ಸ್ ಗಂಗಾಧರ್ ಅಭಿಪ್ರಾಯ
  • ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕಾರ್ಯಕ್ರಮ
ಹಾಸನ: ಭಾರತದ ಯೋಗ ನಮ್ಮ ಆಚಾರ ವಿಚಾರಗಳನ್ನು ವಿಶ್ವಕ್ಕೆ ಸಾರುತ್ತಿದ್ದು, ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸು ನಿಯಂತ್ರಣದಲ್ಲಿರುತ್ತದೆ ಎಂದು ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಟೈಮ್ಸ್ ಗಂಗಾಧರ್ ಹೇಳಿದರು.
ನಗರದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬರು ತಮಗಿರುವ 24 ಗಂಟೆಗಳ ಅವಧಿಯಲ್ಲಿ ಒಂದು ಗಂಟೆಯನ್ನು ಯೋಗ ಮಾಡುವುದಕ್ಕೆ ಮೀಸಲಾಗಿಡಬೇಕು. ಯೋಗ ಮಾಡುವುದರಿಂದ ಜೀವನದಲ್ಲಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಲು ಮಕ್ಕಳಿಗೆ ಸಹಕಾರಿಯಾಗಲಿದ್ದು, ಇದರೊಟ್ಟಿಗೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡುವ ಶಕ್ತಿ ಯೋಗಕ್ಕೆ ಇದೆ. ಮಕ್ಕಳು ಇಂದು ಟಿ.ವಿ., ಮೊಬೈಲ್‌ಗೆ ಹೆಚ್ಚಾಗಿ ಅಂಟಿಕೊಂಡು ದಿನದ ಹಲವು ಗಂಟೆಗಳು ಅದರಲ್ಲೇ ಕಳೆಯುತ್ತಿರುವುದರಿಂದ ಇಂದು ಅನೇಕ ಕಾಯಿಲೆಗಳಿಗೆ ಮಕ್ಕಳು ಗುರಿಯಾಗುತ್ತಿದ್ದಾರೆ. ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಲು ನಮ್ಮ ಶಾಲೆಯಲ್ಲಿಯೇ ಯೋಗ ತರಬೇತಿ ಆರಂಭಿಸಲಾಗುತ್ತಿದ್ದು, ಪ್ರತಿಯೊಬ್ಬರು ಶಾಲೆಗಳಲ್ಲಿ ಇದನ್ನು ಕಡ್ಡಾಯ ಮಾಡಿದರೆ ಸಮಾಜಕ್ಕೆ ಉತ್ತಮ ಮಕ್ಕಳನ್ನು ನೀಡಬಹುದು. ಪ್ರತಿ ಮನೆಯಲ್ಲಿರುವ ಹಿರಿಯರು ಈ ಯೋಗದ ಬಗ್ಗೆ ಅರಿವು ಮೂಡಿಸಿಕೊಂಡು ತಾವುಗಳು ಯೋಗ ಮಾಡುವುದರ ಜತೆ ಜತೆಗೆ ಮಕ್ಕಳಿಗೂ ಯೋಗ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಸುಮಾರು 1500 ಮಕ್ಕಳು ಯೋಗ ತರಬೇತಿ ಪಡೆದುಕೊಂಡರು. ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net