ಕಾಡಾನೆಗಳ ಹಿಂಡನ್ನು ಕಂಡು ಓಡುವ ಭರದಲ್ಲಿ ಮಹಿಳೆಗೆ ಗಾಯ

ಬೇಲೂರು ತಾಲೂಕಿನ ಕೋಗೋಡು ಸಮೀಪದ ಕಾಫಿ ತೋಟದ ಮಧ್ಯ ರಸ್ತೆಯಲ್ಲಿ ಕಾಡಾನೆಗಳು ಬಂದ ಸಂದರ್ಭ ಆತಂಕಗೊಂಡು ಬೈಕಿನಿಂದಿಳಿದು ಓಡುತ್ತಿರುವ ಮಹಿಳೆ.
ಬೇಲೂರು ತಾಲೂಕಿನ ಕೋಗೋಡು ಸಮೀಪದ ಕಾಫಿ ತೋಟದ ಮಧ್ಯ ರಸ್ತೆಯಲ್ಲಿ ಕಾಡಾನೆಗಳು ಬಂದ ಸಂದರ್ಭ ಆತಂಕಗೊಂಡು ಬೈಕಿನಿಂದಿಳಿದು ಓಡುತ್ತಿರುವ ಮಹಿಳೆ.
Published on

ರಸ್ತೆ ಮಧ್ಯೆಯೇ ಕಾಣಿಸಿಕೊಂಡ ಗಜಪಡೆ

ಬೇಲೂರು: ತಾಲೂಕಿನ ಕೋಗೋಡು ಗ್ರಾಮದಲ್ಲಿ ಬುಧವಾರ ಸಂಜೆ ರಸ್ತೆಯಲ್ಲಿ ಬರುತ್ತಿದ್ದ ಕಾಡಾನೆಗಳ ಹಿಂಡನ್ನು ನೋಡಿದ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿ ಪೈಕಿ ಮಹಿಳೆ ತಪ್ಪಿಸಿಕೊಂಡು ಓಡಿ ಹೋಗುವ ಭರದಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ಬುಧವಾರ ಸಂಜೆ 6 ಗಂಟೆ ಸುಮಾರಿನಲ್ಲಿ ಚೀಕನಹಳ್ಳಿ ಪಟ್ಟಣದಿಂದ ರಾಜು ಹಾಗೂ ವಿಮಲಾ ದಂಪತಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಪಕ್ಕದ ತೋಟದಿಂದ ಮತ್ತೊಂದು ತೋಟದತ್ತ ತೆರಳಲು 25ಕ್ಕೂ ಹೆಚ್ಚಿದ್ದ ಕಾಡಾನೆಗಳ ಹಿಂಡು ಕೋಗೋಡು ಸಮೀಪ ರಸ್ತೆ ಮಧ್ಯೆ ಕಾಣಿಸಿಕೊಂಡಿವೆ. ಆದರೆ ಬೈಕ್‌ನ ಹಿಂಬದಿ ಕುಳಿತ್ತಿದ್ದ ಮಹಿಳೆ ವಿಮಲಾ ಕಾಡಾನೆಗಳ ಹಿಂಡನ್ನು ನೋಡಿ ಹೆದರಿ ಆತಂಕಗೊಂಡು ಓಡುವ ವೇಳೆ ಎಡವಿ ಬಿದ್ದು ತಲೆ ಹಾಗೂ ದೇಹದ ಹಲವೆಡೆ ಗಾಯಗಳಾಗಿದ್ದು ಸ್ಥಳೀಯವಾಗಿ ಚಿಕಿತ್ಸೆ ಪಡೆದಿದ್ದಾರೆ. ಅದೃಷ್ಟವಶಾತ್ ಬೈಕ್‌ನಲ್ಲಿದ್ದ ಇಬ್ಬರೂ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಈ ಘಟನೆಯ ಸಂಪೂರ್ಣ ದೃಶ್ಯ ಸಮೀಪದ ಬೆಡಿ ಎಸ್ಟೇಟ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಗ್ರಾಮಸ್ಥರು ಕಾಡಾನೆಗಳ ಹಾವಳಿ ನಿಯಂತ್ರಿಸಲು ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net