ಅಂಬೇಡ್ಕರ್ ಪ್ರತಿಮೆ ಎದುರು ವಿವಾಹ

ಹಾಸನ ನಗರದ ಅಂಬೇಡ್ಕರ್ ಪ್ರತಿಮೆ ಎದುರು ಮನೋಜ್ ಹಾಗೂ ಪ್ರೀತಿ ದಲಿತ ಮುಖಂಡರ ಸಮ್ಮುಖದಲ್ಲಿ ವಿವಾಹವಾದರು.
ಹಾಸನ ನಗರದ ಅಂಬೇಡ್ಕರ್ ಪ್ರತಿಮೆ ಎದುರು ಮನೋಜ್ ಹಾಗೂ ಪ್ರೀತಿ ದಲಿತ ಮುಖಂಡರ ಸಮ್ಮುಖದಲ್ಲಿ ವಿವಾಹವಾದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಬೇಡ್ಕರ್ ಪ್ರತಿಮೆ ಎದುರು ವಿವಾಹ
  • ನವ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು
ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಬೇಡ್ಕರ್ ಪ್ರತಿಮೆ ಶನಿವಾರ ವಿಶೇಷ ವಿವಾಹಕ್ಕೆ ಸಾಕ್ಷಿಯಾಯಿತು.
ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಮನೋಜ್ (22), ಮೂಕಲಿ ಗ್ರಾಮದ ಪ್ರೀತಿ (19) ಇಬ್ಬರು ಪ್ರೇಮಿಗಳು ದಲಿತ ಮುಖಂಡರ ಸಮ್ಮುಖದಲ್ಲಿ ಅಂಬೇಡ್ಕರ್ ಪ್ರತಿಮೆ ಎದುರು ವಿವಾಹವಾದರು.
ಇಬ್ಬರೂ ಅನ್ಯ ಜಾತಿಗೆ ಸೇರಿದ್ದರಿಂದ ಮದುವೆಗೆ ಮನೆಯವರ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಕೆಲ ದಲಿತ ಮುಖಂಡರ ಸಹಾಯದೊಂದಿಗೆ ವಿವಾಹವಾದರು.
ವಿವಾಹದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನವ ವಧು-ವರ, ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಜಾತಿ ಕಾರಣಕ್ಕೆ ನಮ್ಮಿಬ್ಬರ ಮದುವೆಗೆ ಮನೆಯವರ ವಿರೋವಿತ್ತು. ಆದ್ದರಿಂದ ಇಬ್ಬರೂ ಮನೆಯಿಂದ ಹೊರಬಂದು ಪರಸ್ಪರ ಒಪ್ಪಿ ವಿವಾಹವಾಗಿದ್ದೇವೆ. ಯಾರಾದರೂ ತೊಂದರೆ ನೀಡಿದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ. ಹೊಸ ಜೀವನ ಆರಂಭಿಸಿರುವ ನಮಗೆ ಯಾವುದೇ ತೊಂದರೆ ನೀಡಬೇಡಿ ಎಂದು ಮನವಿ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ರಮೇಶ್, ತಾಲೂಕು ಅಧ್ಯಕ್ಷ ಬಾಲಕೃಷ್ಣ ಮೂರ್ತಿ, ಜಿಲ್ಲಾ ಸಂಚಾಲಕ ಕೇಶವ ಮೂರ್ತಿ, ಸಹ ಕಾರ್ಯದರ್ಶಿ ಅಶೋಕ್ ಮೊಸಳೆ, ಖಜಾಂಚಿ ರಮೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net