ವಾಸದ ಮನೆ ತೆರವು ಬೇಡ

ವಾಸದ ಮನೆಗಳನ್ನು ತೆರವುಗೊಳಿಸದಂತೆ ದೇವರಾಜಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಲತಾ ಕುಮಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಾಸದ ಮನೆಗಳನ್ನು ತೆರವುಗೊಳಿಸದಂತೆ ದೇವರಾಜಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಲತಾ ಕುಮಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
Published on
ಬೇಲೂರು: ಸುಮಾರು 50ಕ್ಕೂ ಹೆಚ್ಚು ವರ್ಷಗಳಿಂದ ವಾಸವಿರುವ 150ಕ್ಕೂ ಹೆಚ್ಚು ನಮ್ಮ ಮನೆಗಳನ್ನು ತೆರವುಗೊಳಿಸಲು ಖಾಸಗಿ ವ್ಯಕ್ತಿಗಳು ಮುಂದಾಗಿದ್ದು, ನಮಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ತಾಲೂಕಿನ ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಾಜಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಲತಾಕುಮಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಪಟ್ಟಣದ ಚೆನ್ನಕೇಶವ ದೇಗುಲಕ್ಕೆ ಆಗಮಿಸಿದ್ದ ವೇಳೆ ದೇವರಾಜಪುರ ಗ್ರಾಮದ ನಿವಾಸಿ ಮನವಿ ಸಲ್ಲಿಸಿ ಮಾತನಾಡಿದ ಗ್ರಾಮದ ಕವಿತಾ, ಗ್ರಾಮದ ಸರ್ವೇ ನಂಬರ್ 102ರಲ್ಲಿ ವಾಸವಿದ್ದೇವೆ. ನಮಗೆ ಈ ಹಿಂದೆಯೇ ಸರ್ಕಾರದಿಂದ ಹಕ್ಕುಪತ್ರಗಳು ಸಹ ಸಿಕ್ಕಿದೆ. ಆದರೆ, ಇತ್ತೀಚೆಗೆ ಖಾಸಗಿ ವ್ಯಕ್ತಿಗಳಿಬ್ಬರು ಈ ಜಾಗ ನಮಗೆ ಸೇರಿದ್ದು, ನೀವು ಇಲ್ಲಿಂದ ಮನೆಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ನಾವೇ ತೆರವು ಮಾಡುತ್ತೇವೆ ಎಂದು ಮನೆಗಳ ಶೀಟು, ಹೆಂಚು ಹಾಗೂ ಕಟ್ಟಡಗಳನ್ನು ತೆಗೆಯುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಅವರು ಈ ರೀತಿ ಮಾಡಿದರೆ ನಾವು ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಆದ್ದರಿಂದ ನೀವೇ ನಮಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದಲ್ಲಿ ನಾವು ಬೀದಿಪಾಲಾಗಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.
ಗ್ರಾಮಸ್ಥರ ಮನವಿ ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಲತಾಕುಮಾರಿ, ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಈ ವಿಷಯ ಚರ್ಚಿಸುತ್ತೇನೆ. ಇದರ ಸಾಧಕ ಬಾಧಕಗಳನ್ನು ತಿಳಿದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ಮನೆಗಳನ್ನು ತೆರವು ಗೊಳಿಸದೆ ಯಥಾಸ್ಥಿತಿ ಕಾಪಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮಸ್ಥರಾದ ಸುರೇಶ್, ಸುಮಲತಾ, ಗಾಯತ್ರಿ, ಮಲ್ಲಿಕಾರ್ಜುನ, ಜಗದೀಶ್, ಅರುಣ್, ಆನಂದ್, ಪ್ರತಾಪ್, ಸುರೇಶ್, ಕರವೇ ಮುಖಂಡರಾದ ಚಂದ್ರಶೇಖರ್, ಖಾದರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net