2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಭತ್ತ, ರಾಗಿ, ಉದ್ದು, ಹೆಸರು, ಅಲಸಂದೆ, ಮುಸುಕಿನ, ಜೋಳ, ತೊಗರಿ, ಸೂರ್ಯಕಾಂತಿ, ನೆಲಗಡಲೆ ಬೆಳೆಗಳಿಗೆ 11,874 ಕ್ವಿಂಟಾಲ್ ಬೇಡಿಕೆ ಇದ್ದು, ಪ್ರಸ್ತುತ 13,510 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಹಾಸನದ ಕೆಎಸ್‌ಎಸ್‌ಸಿ ನಲ್ಲಿ 6450 ಕ್ವಿಂಟಾಲ್, ಮತ್ತು ಎನ್‌ಎಸ್‌ಸಿಯಲ್ಲಿ 4,460 ಕ್ವಿಂಟಾಲ್ (ಭತ್ತ, ರಾಗಿ, ಉದ್ದು, ಹೆಸರು, ಅಲಸಂದೆ, ತೊಗರಿ ನೆಲಗಡಲೆ) ಬಿತ್ತನೆ ಬೀಜ ದಾಸ್ತಾನಿದೆ.