ಆಹಾರ ಮೇಳದಲ್ಲಿ ತರಹೇವಾರಿ ತಿಂಡಿಗಳು

ಅರಕಲಗೂಡು ತಾಲೂಕಿನ ಕೊಣನೂರಿನ ಎಂಕೆಎಸ್ ಲಯನ್ಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಬಗೆ ಬಗೆಯ ತಿನಿಸುಗಳನ್ನು ಮಾರಾಟಕ್ಕಿಟ್ಟು ಗಮನ ಸೆಳೆದರು.
ಅರಕಲಗೂಡು ತಾಲೂಕಿನ ಕೊಣನೂರಿನ ಎಂಕೆಎಸ್ ಲಯನ್ಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಬಗೆ ಬಗೆಯ ತಿನಿಸುಗಳನ್ನು ಮಾರಾಟಕ್ಕಿಟ್ಟು ಗಮನ ಸೆಳೆದರು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಕೈ ರುಚಿಗೆ ಮಾರು ಹೋದ ಶಿಕ್ಷಕರು, ಪಾಲಕರು
ಅರಕಲಗೂಡು: ತಾಲೂಕಿನ ಕೊಣನೂರು ಎಂಕೆಎಸ್ ಲಯನ್ಸ್ ಶಾಲೆಯ ಆವರಣದಲ್ಲಿ ಶುಕ್ರವಾರ ಆಹಾರ ಮೇಳ ನಡೆಯಿತು.
ಮೇಳದಲ್ಲಿ ವಿದ್ಯಾರ್ಥಿಗಳು ವಿವಿಧ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಗಮನ ಸೆಳೆದರು. ಗುಲಾಬ್ ಜಾಮೂನ್, ಫ್ರೂಟ್ ಸಲಾಡ್. ಮಿಲ್ಕ್‌ಶೇಕ್, ಪಾನಿಪೂರಿ, ಗೋಲಗೊಪ್ಪ, ಬರ್ಡ್ ನೆಸ್ಟ್ , ಸಮೋಸಾ, ಪ್ರೆಶ್ ಫ್ರೂಟ್ಸ್, ಚುರುಮುರಿ, ಮಸಾಲ ಮಜ್ಜಿಗೆ , ಕಾಳು ಉಸುರಿ, ಕೇಕ್, ನಿಪ್ಪಟ್ಟು ಮಸಾಲ, ಪಾಪಡ್ ಮಸಾಲ, ವಿವಿಧ ಬಗೆಯ ಜ್ಯೂಸ್‌ಗಳು, ವಿವಿಧ ಬಗೆಯ ಸಿಹಿ ತಿಂಡಿಗಳು ಜನರ ಬಾಯಲ್ಲಿ ನೀರೂರಿಸಿದವು.
ಕಡಿಮೆ ಹಣ ವ್ಯಯಿಸಿ ಮಾಡಿದ ತಿಂಡಿಗಳ ಮಾರಾಟದಿಂದ ಹೆಚ್ಚಿನ ಹಣ ಗಳಿಸಿದ್ದು ಸಮಾಧಾನ ತಂದಿತು. ಇದರಿಂದ ಮನೆಯಲ್ಲಿ ತಾಯಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಲು ಅನುಕೂಲವಾಯಿತು ಎಂದು ಮರಾಟ ಮಾಡಿದ ವಿದ್ಯಾರ್ಥಿಗಳು ಖುಷಿಪಟ್ಟರು.
ಆಹಾರ ಮೇಳವನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ರವಿಕಮಾರ್ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಅಬೂಬಕರ್, ಲಯನ್ಸ್ ಕ್ಲಬ್ ನ ಮನೋರಮಾ ವಸಂತಕುಮಾರ್, ಮುಖ್ಯ ಶಿಕ್ಷಕಿ ಎ.ಸಿ.ಶೈಲಜಾ, ಎಚ್.ಆರ್.ಗಾಯತ್ರಿ, ಪಾಲಕರು, ಸಹ ಶಿಕ್ಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net