ಸಮಯಕ್ಕೆ ಬೆಲೆ ಕೊಟ್ಟು ಭವಿಷ್ಯದಲ್ಲಿ ಸಾಧನೆ ಮಾಡಿ

ಅರಕಲಗೂಡು ತಾಲೂಕು ಬೈಚನಹಳ್ಳಿ ಗ್ರಾಮಾಂತರ ಪದವಿ ಪೂರ್ವ ಕಾಲೇಜಿಲ್ಲಿ ಸೋಮವಾರ ಮಾಜಿ ಸಚಿವ ಕೆ.ಬಿ. ಮಲ್ಲಪ್ಪ ಅವರ 13ನೇ ಪುಣ್ಯ ಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಸುರೇಶ್ ಬಾಬು, ಗುಮಾಸ್ತ ಚಂದ್ರೇಗೌಡ, ಡಿ ದರ್ಜೆ ನೌಕರ ಕರಿಯಯ್ಯ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಡಾ. ಮೋಹನ್ ಮಲ್ಲಪ್ಪ, ಎಂ.ಎಸ್. ಯೋಗೇಶ್, ರಘು, ಮಂಜೇಗೌಡ, ಕುಮಾರಯ್ಯ ಇತರರಿದ್ದರು.
ಅರಕಲಗೂಡು ತಾಲೂಕು ಬೈಚನಹಳ್ಳಿ ಗ್ರಾಮಾಂತರ ಪದವಿ ಪೂರ್ವ ಕಾಲೇಜಿಲ್ಲಿ ಸೋಮವಾರ ಮಾಜಿ ಸಚಿವ ಕೆ.ಬಿ. ಮಲ್ಲಪ್ಪ ಅವರ 13ನೇ ಪುಣ್ಯ ಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಸುರೇಶ್ ಬಾಬು, ಗುಮಾಸ್ತ ಚಂದ್ರೇಗೌಡ, ಡಿ ದರ್ಜೆ ನೌಕರ ಕರಿಯಯ್ಯ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಡಾ. ಮೋಹನ್ ಮಲ್ಲಪ್ಪ, ಎಂ.ಎಸ್. ಯೋಗೇಶ್, ರಘು, ಮಂಜೇಗೌಡ, ಕುಮಾರಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಮೋಹನ್ ಮಲ್ಲಪ್ಪ ಕಿವಿಮಾತು
ಅರಕಲಗೂಡು: ವಿದ್ಯಾರ್ಥಿಗಳು ಪರೀಕ್ಷಾ ಹಂತದಲ್ಲಿ ಸಮಯ ವ್ಯರ್ಥ ಮಾಡದೆ ಓದಿನತ್ತ ಗಮನ ಕೇಂದ್ರೀಕರಿಸಿ ಉತ್ತಮ ಫಲಿತಾಂಶ ಪಡೆಯಲು ಶ್ರಮಿಸಬೇಕು ಎಂದು ಬೆಂಗಳೂರು ಜಯದೇವ ಆಸ್ಪತ್ರೆಯ ವೈದ್ಯ ಡಾ.ಮೋಹನ್ ಮಲ್ಲಪ್ಪ ಹೇಳಿದರು.
ತಾಲೂಕಿನ ಬೈಚನಹಳ್ಳಿ ಗ್ರಾಮಾಂತರ ಪದವಿ ಪೂರ್ವ ಕಾಲೇಜಿಲ್ಲಿ ಸೋಮವಾರ ಮಾಜಿ ಸಚಿವ ಕೆ.ಬಿ.ಮಲ್ಲಪ್ಪ ಅವರ 13ನೇ ಪುಣ್ಯ ಸ್ಮರಣೆ ಅಂಗವಾಗಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿದ ಅವರು, ವಿದ್ಯೆ ಸಾಧಕರ ಸ್ವತ್ತಾಗಿದ್ದು ಪ್ರತಿ ಹಂತದಲ್ಲೂ ಸಮಯಕ್ಕೆ ಹೆಚ್ಚು ಬೆಲೆ ಕೊಟ್ಟು ಕಲಿಕೆಗೆ ಒತ್ತು ನೀಡಿದರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದರು.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವ ನಿಟ್ಟಿನಲ್ಲಿ 80ರ ದಶಕದಲ್ಲೇ ವಿದ್ಯಾಸಂಸ್ಥೆ ಸ್ಥಾಪಿಸಿ ಶಾಲೆ ನಿರ್ಮಿಸುವ ಸದುದ್ದೇಶದಿಂದ ಸಾರ್ವಜನಿಕವಾಗಿ ಚಂದ ವಸೂಲಿ ಮಾಡಿ ಮಾಜಿ ಸಚಿವ ಕೆ.ಬಿ.ಮಲ್ಲಪ್ಪ ಅವರ ದೂರದೃಷ್ಟಿಯಿಂದ ಇಂದು ಲಕ್ಷಾಂತರ ವಿದ್ಯಾರ್ಥಿಗಳು ಶಾಲೆ ವಿದ್ಯಾಭ್ಯಾಸ ಪಡೆದಿದ್ದಾರೆ. ಇದರಿಂದ ಹಲವು ಜನರಿಗೆ ನೌಕರಿ ದೊರಕಿದೆ. ಅವರು ಸುದೀರ್ಘ ಕಾಲ ಶಾಲೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ನಂತರ ನಮ್ಮ ಕುಟುಂಬದ ಮೇಲೆ ವಿಶ್ವಾಸ ಇಟ್ಟು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ಆಡಳಿತ ಮಂಡಳಿ ಕಾರ್ಯದರ್ಶಿ ಎಂ.ಸಿ.ರಘು ಮಾತನಾಡಿ, ಕೆ.ಬಿ.ಮಲ್ಲಪ್ಪನವರು ಶಾಸಕರಾಗಿ ಸಚಿವರಾಗಿ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರು ಕಟ್ಟಿಸಿದ ಶಾಲೆಯ ಆವರಣದಲ್ಲಿ ಅವರ ಪುತ್ಥಳಿ ನಿರ್ಮಿಸಿ ಮುಂದಿನ ಯುವ ಪೀಳಿಗೆ ಅವರ ಉನ್ನತ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಬಿ.ಎಂ.ಮಂಜೇಗೌಡ, ಎಂ.ಎಸ್.ಯೋಗೇಶ್, ಎಂ.ಎಸ್. ಅಂಜನೇಗೌಡ, ಬಿ.ಆರ್.ರಾಜೀವ್, ರಾಮಮೂರ್ತಿ, ಬೇಲೂರೇಗೌಡ, ಖಜಾಂಚಿ ಎಂ.ಆರ್.ಜಯರಾಮ್, ಮುಖ್ಯ ಶಿಕ್ಷಕ ವಸಂತಕುಮಾರ್, ಪ್ರಾಂಶುಪಾಲ ಡಿ.ಕೆ.ಕುಮಾರಯ್ಯ, ಹಿರಿಯ ಶಿಕ್ಷಕ ಎಂ.ಎ.ರಂಗಸ್ವಾಮಿ, ಶಿಕ್ಷಕರು, ಉಪನ್ಯಾಸಕರು ಇದ್ದರು.
ನಿವೃತ್ತ ಉಪನ್ಯಾಸಕ ಸುರೇಶ್ ಬಾಬು, ಗುಮಾಸ್ತ ಚಂದ್ರೇಗೌಡ, ಡಿ ದರ್ಜೆ ನೌಕರ ಕರಿಯಯ್ಯ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net