ಬ್ಯಾಂಕ್ ನಿಯಮಗಳನ್ನು ಅರಿತು ಪ್ರಗತಿಗೆ ಶ್ರಮಿಸಿ

ಅರಕಲಗೂಡು ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ಆಯೋಜಿಸಿದ್ದ ಧರ್ಮಸ್ಥಳ ಸಂಸ್ಥೆಯ ವಲಯ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಉದ್ಘಾಟಿಸಿದರು. ರವೀಂದ್ರ, ಗೀತಾ, ಪುಟಾಣಿ, ರೇಣುಕಮ್ಮ, ನಾಗಮಣಿ, ಸುಜಾತಾ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಧರ್ಮಸ್ಥಳ ಸಂಸ್ಥೆಯ ವಲಯ ಒಕ್ಕೂಟದ ಜಿಲ್ಲಾ ನಿರ್ದೇಶಕಿ ಲೀಲಾವತಿ ಸಲಹೆ
ಅರಕಲಗೂಡು: ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ಗುರುವಾರ ಧರ್ಮಸ್ಥಳ ಸಂಸ್ಥೆಯ ವಲಯ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಮಹಿಳಾ ಪದಾಧಿಕಾರಿಗಳು ಉತ್ತಮ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಒಕ್ಕೂಟದ ಪ್ರಗತಿಗೆ ಶ್ರಮಿಸಬೇಕು. ಇದಕ್ಕಾಗಿ ಬ್ಯಾಂಕ್ ನಿಯಮಗಳು, ಸಿಬಿಲ್, ಬಡ್ಡಿ ದರ ಹಾಗೂ ವಿವಿಧ ಯೋಜನೆಗಳ ಮಾಹಿತಿ ಅರಿತುಕೊಳ್ಳಬೇಕು. ಮುಖ್ಯವಾಗಿ ಒಕ್ಕೂಟದ ಬಲವರ್ಧನೆಗಾಗಿ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸಬೇಕು ಎಂದರು.
ಒಕ್ಕೂಟದ ತಾಲೂಕು ಯೋಜನಾಧಿಕಾರಿ ಯಶೋದಾ, ಒಕ್ಕೂಟದ ಗೀತಾ, ಪುಟಾಣಿ, ರೇಣುಕಮ್ಮ, ನಾಗಮಣಿ, ಸುಜಾತಾ, ಮೇಲ್ವಿಚಾರಕ ರವೀಂದ್ರ, ಸೇವಾ ಪ್ರತಿನಿಧಿ ಜಗದೀಶ್, ಮಂಜುಳಾ, ಕವಿತಾ, ರೇಣುಕಾ, ಶೋಭಾರಾಣಿ, ಗೀತಾ, ನೋಡೆಲ್ ಅಧಿಕಾರಿ ಅಭಿಜಿತ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net