ಕೆಲವರು ಸೇನಾ ಸಮವಸ್ತ್ರ ಧರಿಸಿ, ರಾಷ್ಟ್ರಧ್ವಜ ಹಿಡಿದು ಗಮನ ಸೆಳೆದರು. ಡೇರಿ ವೃತ್ತದ ಬಳಿಯಿಂದ ಹೊರಟ ರ‌್ಯಾಲಿಯು, ರಿಂಗ್ ರಸ್ತೆ, ಸುಬೇದಾರ್ ನಾಗೇಶ್ ವೃತ್ತ, ಸಾಲಗಾಮೆ ರಸ್ತೆ, ಸಹ್ಯಾದ್ರಿ ಸರ್ಕಲ್, ಹೇಮಾವತಿ ಪ್ರತಿಮೆ, ಎನ್.ಆರ್.ವೃತ್ತ, ಬಿಎಂ ರಸ್ತೆ, ರೈಲ್ವೆ ನಿಲ್ದಾಣ ಮುಂಭಾಗ, ಡೇರಿ ವೃತ್ತದ ಮೂಲಕ ಕೆಂಚಟ್ಟಹಳ್ಳಿಯಲ್ಲಿರುವ ಅರೆಸೇನಾ ಪಡೆಯ ಭವನದ ಬಳಿಗೆ ತೆರಳಿ ಕೊನೆಗೊಂಡಿತು. ಆಗಮಿಸಿದ್ದ ಎಲ್ಲರಿಗೂ ಅಲ್ಲೇ ಊಟದ ವ್ಯವಸ್ಥೆ ಮಾಡಲಾಗಿತ್ತು.