ನಾಡಿಗೆ ತಿಮ್ಮಕ್ಕ ಕೊಟ್ಟ ಕೊಡುಗೆ ಅಪಾರ

 ಆಲೂರು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಗಿಡ ನೆಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲಿಸಲಾಯಿತು. ನ್ಯಾಯಾಧೀಶೆ ಸ್ನೇಹಾ, ವಕೀಲರ ಸಂಘದ ಅಧ್ಯಕ್ಷ ಎಂಎಸ್ ಮಹೇಶ್ ಇತರರು ಇದ್ದರು.
ಆಲೂರು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಗಿಡ ನೆಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲಿಸಲಾಯಿತು. ನ್ಯಾಯಾಧೀಶೆ ಸ್ನೇಹಾ, ವಕೀಲರ ಸಂಘದ ಅಧ್ಯಕ್ಷ ಎಂಎಸ್ ಮಹೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶೆ ಎಂ.ಸ್ನೇಹಾ ಅಭಿಮತ
  • ಗಿಡ ನೆಡುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಕೆ
ಆಲೂರು : ಸಸಿಗಳನ್ನೇ ಮಕ್ಕಳೆಂದು ಭಾವಿಸಿ, ನೀರು ಎರೆದು ಸಾವಿರಾರು ಮರಗಳನ್ನು ಬೆಳೆಸಿ ವಿಶ್ವಕ್ಕೆ ಮಾದರಿಯಾಗುವ ಮೂಲಕ ಪರಿಸರ ಮತ್ತು ಜೀವಸಂಕುಲವನ್ನು ಸಂರಕ್ಷಿಸಿದ ಸಾಲುಮರದ ತಿಮ್ಮಕ್ಕ ಅವರ ಕೊಡುಗೆ ಅವಿಸ್ಮರಣೀಯ ಎಂದು ಆಲೂರು ತಾಲೂಕು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಎಂ.ಸ್ನೇಹಾ ಅಭಿಪ್ರಾಯಪಟ್ಟರು.
ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಆಲೂರು ತಾಲೂಕು ವಕೀಲರ ಸಂಘದ ವತಿಯಿಂದ ಸಾಲು ಮರದ ತಿಮ್ಮಕ್ಕ ಅವರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಸಾಲು ಮರದ ತಿಮ್ಮಕ್ಕನ ಪರಿಸರ ಪ್ರೀತಿ ಮತ್ತು ಕಾಳಜಿಯನ್ನು ಯುವಜನತೆಗೆ ತಿಳಿಯಬೇಕು. ಅವರ ನಾಡಿಗೆ ಕೊಟ್ಟ ಕೊಡುಗೆ ಅಪಾರ. ವಿದ್ಯೆ ಇಲ್ಲದಿದ್ದರೂ ವಿದ್ಯಾವಂತರಿಗೆ ಪರಿಸರ-ಪ್ರಕೃತಿಯ ಮಹಿಮೆಯನ್ನು ಸಾರಿ ಸಾರಿ ಹೇಳಿ ಹೊರಟ ಸಾಲುಮರದ ತಿಮ್ಮಕ್ಕನಿಗೆ ತುಂಬು ಹೃದಯದ ನಮನಗಳು ಎಂದು ಸಂತಾಪ ಸೂಚಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ಮಹೇಶ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ತಿಮ್ಮಕ್ಕರ ನೆನಪು ಸದಾ ಅಜಾರಾಮರವಾಗಲು ಸೂಕ್ತ ಕೊಡುಗೆ ನೀಡಲಿ. ಅಮ್ಮ ತಿಮ್ಮಕ್ಕ ನಾಡಿನ ಜನರ ಆರಾಧ್ಯ ದೈವರಾಗಿದ್ದರು ಮತ್ತು ಪರಿಸರ ಕಾಳಜಿಯಲ್ಲಿ ಅಪಾರ ಪರಿಶ್ರಮ ಹೊಂದಿದ್ದರು ಎಂದರು.
ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಅಗಲೀಕರಣ ಕಾಮಗಾರಿಯಿಂದ ರಸ್ತೆ ಬದಿಯಲ್ಲಿರುವ ಸಾವಿರಾರು ಮರಗಳನ್ನು ಕಡಿದು ಹಾಕಲಾಗಿದೆ. ಕಾಮಗಾರಿ ಪೂರ್ಣಗೊಂಡಿರುವ ಸಲುವಾಗಿ ರಸ್ತೆ ಬದಿಯಲ್ಲಿ ಗಿಡಗಳನ್ನು ಬೆಳೆಸಲು ಅಗತ್ಯ ಕ್ರಮವನ್ನು ಹೆದ್ದಾರಿಯವರು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ವಿಜಯ ಸಂಪಾಂಗವಿ, ಹಿರಿಯ ವಕೀಲರಾದ ಮಂಜೇಗೌಡ, ಬಿ.ಡಿ ಸಂದೀಪ್, ರವಿಶಂಕರ್, ಕೆ.ಎನ್ ನಾಗರಾಜ್, ಟಿ.ಮಂಜುನಾಥ್, ಕೀರ್ತಿ ಕುಮಾರ್, ದುಷಂತ್ ಸೇರಿದಂತೆ ವಕೀಲರ ಸಂಘದ ಸದಸ್ಯರು ಹಾಜರಿದ್ದರು
ಪೋಟೋ ಕ್ಯಾಪ್ಶನ್: 15-ತಿಮ್ಮಕ್ಕ ಶ್ರದ್ಧಾಂಜಲಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net