ಹಾಸನ ನಗರದ ಸೆಂಟ್ರಲ್ ಕಾಮರ್ಸ್ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 336ನೇ ಮನೆ-ಮನೆ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ ಅವರ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕೃತಿಯನ್ನು ವಿಮರ್ಶೆ ಮಾಡಿ ಪ್ರೊ. ಜಿ.ಎಸ್.ಅನಸೂಯಾ ಮಾತನಾಡಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಾಹಿತ್ಯ ಕ್ಷೇತ್ರದಲ್ಲಿ ಜೀವನ ಮೌಲ್ಯ ಅಡಕ
ಪ್ರೊ. ಜಿ.ಎಸ್. ಅನಸೂಯಾ ಅಭಿಮತ
ಹಾಸನ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜೀವನ ಮೌಲ್ಯಗಳು ಅಪಾರವಾಗಿ ಅಡಕವಾಗಿವೆ. ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದ, ಉಪನಿಷತ್, ಜಾನಪದ, ಶರಣರ ವಚನಗಳು ಇದಕ್ಕೆ ಸಾಕ್ಷಿಯಾಗಿವೆ ಎಂದು ಪ್ರೊ. ಜಿ.ಎಸ್. ಅನಸೂಯಾ ಹೇಳಿದರು.
ನಗರದ ಸೆಂಟ್ರಲ್ ಕಾಮರ್ಸ್ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 336ನೇ ಮನೆಮನೆ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಎನ್.ಎಲ್.ಚನ್ನೇಗೌಡ ಅವರ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕೃತಿಯನ್ನು ವಿಮರ್ಶೆ ಮಾಡಿ ಮಾತನಾಡಿದರು.
ಎನ್.ಎಲ್. ಚನ್ನೇಗೌಡ ಅವರ ಕೃತಿ ಅತ್ಯಮೂಲ್ಯವಾಗಿದ್ದು, ಭಾರತೀಯ ಆದರ್ಶಗಳನ್ನು, ಮಾನವೀಯ ಮೌಲ್ಯಗಳನ್ನು ಸಾರುವ ಕೃತಿಯಾಗಿದೆ. ಸಾಹಿತಿ ಎನ್.ಎಲ್.ಚನ್ನೇಗೌಡ ಅವರು ತಾವು ದಶಕದ ಹಿಂದೆ ರಚಿಸಿರುವ ಈ ಕೃತಿಯಲ್ಲಿ ಜೀವನದ ಮೌಲ್ಯಗಳನ್ನು ಶರಣರ ವಚನಗಳಲ್ಲಿ ದಾಸರ ಕೀರ್ತನೆಗಳಲ್ಲಿ, ಧರ್ಮ ಗ್ರಂಥಗಳಲ್ಲಿ ನಿದರ್ಶನದ ಮೂಲಕ ಕಾಣಬಹುದಾಗಿದೆ. ಮನೆ-ಮನೆ ಕವಿಗೋಷ್ಠಿಯ ಮೂಲಕ ಉತ್ತಮ ಕೃತಿಗಳು ವಿಮರ್ಶೆಯಾಗುತ್ತಿರುವುದು ಸ್ವಾಗತಾರ್ಹ ಎಂದರು.