ಈ ಬಾರಿಯ ಅಧಿವೇಶನದಲ್ಲಿ ಹಲವು ವಿಚಾರ, ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಶ್ನೆ ಎತ್ತಿದ್ದೇನೆ. ಆದರೆ ಸರ್ಕಾರ, ಸಚಿವರ ಕಡೆಯಿಂದ ಸಮಾಧಾನಕರ ಉತ್ತರ ಸಿಕ್ಕಿಲ್ಲ. ಅಭಿವೃದ್ಧಿ ಪರವಾದ, ಅನುದಾನ ನೀಡುವ ಉತ್ತರವೂ ಸಿಗಲಿಲ್ಲ. ಮೆಕ್ಕೆಜೋಳಕ್ಕೆ ಪರಿಹಾರದ ಬೇಡಿಕೆಗೆ ಸ್ಪಂದನೆ ಸಿಗಲಿಲ್ಲ. ಬದಲಾಗಿ ಮಾತೆತ್ತಿದರೆ ಅನೇಕರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದರು ಎಂದು ಬೇಸರ ಹೊರ ಹಾಕಿದರು. ಮುಂಗಾರು ಮಳೆ ನಷ್ಟದ ನಡೆದಿರುವ ಸರ್ವೇ ಸರಿಯಾಗಿಲ್ಲ, ಇನ್ನಾದರೂ ಸಮರ್ಪಕ ಸರ್ವೇ ನಡೆಸಿ ಆಗಿರುವ ಬೆಳೆನಷ್ಟಕ್ಕೆ ನ್ಯಾಯಯುತ ಪರಿಹಾರ ನೀಡಲಿ ಎಂದು ಆಗ್ರಹಿಸಿದರು.