ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಕೃಷಿ ಸಹಾಯಕ ನಿರ್ದೇಶಕಿ ಸ್ವಪ್ನಾ ಪ್ರಯತ್ನ ನಡೆಸಿ ವಾಪಸ್ ಹಣ ಕೊಡಿಸುವ ಭರವಸೆ ನೀಡಿದ್ದರು. ಕುಟುಂಬದ ಪ್ರಯತ್ನದ ಫಲವಾಗಿ ಪರಿಹಾರ ಹಣ ಬ್ಯಾಂಕ್ ಖಾತೆಯಿಂದ ಪಡೆದಿದ್ದ ಅರೆಕಲ್ಲು ಹೊಸಹಳ್ಳಿ ಜಯಮ್ಮ ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ. ಪ್ರಸ್ತುತ ಅರ್ಹ ಫಲಾನುಭವಿ ಖಾತೆ ಸೇರಿದೆ. ಇದರಿಂದ ಇಡೀ ಪ್ರಕರಣ ಸುಖಾಂತ್ಯವಾಗಿದೆ. ಕಚೇರಿಗೆ ಭೇಟಿ ನೀಡಿದ ಇಬ್ಬರೂ ಜಯಮ್ಮ ಹಾಗೂ ಕೃಷಿ ಇಲಾಖೆ ವ್ಯವಸ್ಥಾಪಕ ಅಧಿಕಾರಿ ರಾಹುಲ್‌ಪ್ರಕಾಶ್, ವಿಎ ನವೀನ್ ಹಣ ಸಂದಾಯ ರಶೀದಿಗೆ ಸಹಿ ಹಾಕಿಸಿಕೊಂಡು ಹಣ ವಾಪಸ್ ಕೊಡಿಸಿದ್ದಾರೆ.