ವಕೀಲ ವೃತ್ತಿಯಲ್ಲಿ ಸತ್ಯದ ಅನ್ವೇಷಣೆ ಪ್ರಮುಖ ಕೆಲಸ

ಹಾಸನ ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಕೆ ಸಂದೇಶ್, ಜಿ.ಕೆ.ದಾಕ್ಷಾಯಿಣಿ, ಕಾರ್ಲೆ ಮೊಗಣ್ಣ ಗೌಡ, ಪ್ರವೀಣ್ ಗೌಡ ಇತರರು ಇದ್ದರು.
ಹಾಸನ ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಕೆ ಸಂದೇಶ್, ಜಿ.ಕೆ.ದಾಕ್ಷಾಯಿಣಿ, ಕಾರ್ಲೆ ಮೊಗಣ್ಣ ಗೌಡ, ಪ್ರವೀಣ್ ಗೌಡ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಕೀಲ ವೃತ್ತಿಯಲ್ಲಿ ಸತ್ಯದ ಅನ್ವೇಷಣೆ ಪ್ರಮುಖ ಕೆಲಸ
  • ಹೈಕೋರ್ಟ್ ನ್ಯಾಯಾಧೀಶ ಎಚ್.ಕೆ.ಸಂದೇಶ್ ಅಭಿಮತ
  • ಕಾನೂನು ಕಾರ್ಯಾಗಾರ ಉದ್ಘಾಟನೆ
ಹಾಸನ: ನ್ಯಾಯಾಂಗವನ್ನು ಸದೃಢಗೊಳಿಸುವುದು, ಸತ್ಯದ ಅನ್ವೇಷಣೆ ಮಾಡುವುದು ವಕೀಲ ವೃತ್ತಿಯಲ್ಲಿ ಪ್ರಮುಖವಾದ ಕೆಲಸ, ನ್ಯಾಯವನ್ನು ನಿರ್ಣಯದ ವೇಳೆ ಸತ್ಯದ ಕಡೆ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಎಚ್.ಕೆ.ಸಂದೇಶ್ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ವಕೀಲರ ಪರಿಷತ್, ಬೆಂಗಳೂರು, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೆ ಜ್ಞಾನ ಸಂಪಾದಿಸಲು ವಯಸ್ಸಿನ ಮಿತಿ ಇರುವುದಿಲ್ಲ, ತಮ್ಮ ಜೀವನದ ಪ್ರತಿ ಹಂತದಲ್ಲಿ ಜ್ಞಾನ ಸಂಪಾದಿಸಿಕೊಂಡು ವೃತ್ತಿಯಲ್ಲಿ ಯಶಸ್ಸು ಕಾಣಬೇಕು, ಕಾನೂನು ಶಿಕ್ಷಣ ಸಂಸ್ಥೆಗಳು ತಮ್ಮ ಭವಿಷ್ಯವನ್ನು ಕತ್ತಲೆಯಿಂದ ಬೆಳಕಿಗೆ ರೂಪಿಸುವಲ್ಲಿ ಅವಕಾಶ ಮಾಡಿಕೊಡುತ್ತದೆ, ನಮ್ಮಲ್ಲಿ ತಾಳ್ಮೆ, ಪರಿಶ್ರಮ, ಧೈರ್ಯ, ಆಸಕ್ತಿ, ಸಮಯ ಪ್ರಜ್ಞೆ ಇದ್ದರೆ ವಕೀಲ ವೃತ್ತಿಯಲ್ಲಿ ಯಶಸ್ಸಿನ ದಾರಿ ತೋರುತ್ತದೆ ಎಂದು ತಿಳಿಸಿದರು.
ನ್ಯಾಯಾಧೀಶರು ಮತ್ತು ವಕೀಲರು ದಿನನಿತ್ಯ ವಿದ್ಯಾರ್ಥಿಗಳೇ ಆಗಿರುತ್ತಾರೆ , ಪ್ರತಿದಿನ ಕಲಿಯುವ ಉತ್ಸಾಹ ಇರಬೇಕು, ಕಲಿಕೆ ನಮ್ಮ ಜೀವನವನ್ನೇ ಬದಲಾಯಿಸುತ್ತದೆ. ಯಾವುದೇ ವೃತ್ತಿಯಲ್ಲಿ ಯಶಸ್ಸು ಕಾಣಬೇಕಾದರೆ ಕೆಲಸದಲ್ಲಿ ಮೊದಲಿಗರಾಗಿರಬೇಕು ಎಂದು ಹೇಳಿದರು.
ವಕೀಲ ವೃತ್ತಿಯನ್ನು ಉತ್ಸಾಹದಿಂದ ಸ್ವೀಕರಿಸಬೇಕು, ಇಲ್ಲದಿದ್ದರೆ ಯಶಸ್ಸು ಕಾಣಲು ಸಾಧ್ಯವಿಲ್ಲ, ಯುವ ವಕೀಲರಿಗೆ ಕಲಿಯುವ ಉತ್ಸಾಹವನ್ನು ಹಿರಿಯ ವಕೀಲರು ತುಂಬಬೇಕು ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಕಾನೂನು ಹುದ್ದೆಗಳಿಗೆ ಪರೀಕ್ಷೆಗಳನ್ನು ತೆಗೆದು ಕೊಳ್ಳುವರ ಸಂಖ್ಯೆ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ಬರುವ ಆಗು-ಹೋಗುಗಳಿಗೆ ಹಿಂಜರಿಯಬಾರದು, ಛಲದಿಂದ ಸ್ವೀಕರಿಸಬೇಕು, ಪ್ರತಿಭೆಗೆ ಯಾವುದೇ ಜಾತಿ, ಧರ್ಮ ಮುಖ್ಯವಾಗುವುದಿಲ್ಲ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹೇಮಾವತಿ ಮಾತನಾಡಿ, ಕಾರ್ಯಗಾರದಿಂದ ವಕೀಲರು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಿಣಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕಾರ್ಲೆ ಮೊಗಣ್ಣ ಗೌಡ, ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net