ಹಿರಿಯರ ಜ್ಞಾನ ಸಮಾಜಕ್ಕೆ ಅತ್ಯಮೂಲ್ಯ ಆಸ್ತಿ

ಶಾಂತಿಗ್ರಾಮ ಹಳೆಯ ಶಾಲಾ-ಕಾಲೇಜು ವಿದ್ಯಾರ್ಥಿ ಸಂಘವು ಹಿರಿಯ ನಾಗರಿಕರನ್ನು ಸನ್ಮಾನಿಸುವ ಸಮಾರಂಭ ಹಮ್ಮಿಕೊಂಡಿತ್ತು. ಹಂಪನಹಳ್ಳಿ ತಿಮ್ಮೇಗೌಡ, ಗಂಡಸಿ ಗೌಡ, ಜಿ.ಆರ್.ಮಂಜೇಶ್, ಜಿ.ಎನ್.ನಾಗರಾಜು , ಎಲ್. ರಂಗಪ್ಪ, ಎಸ್. ಆರ್.ವಿಜಯಕುಮಾರ್, ತಿಮ್ಮಪ್ಪ ಶೆಟ್ಟಿ ಇತರರಿದ್ದರು.
ಶಾಂತಿಗ್ರಾಮ ಹಳೆಯ ಶಾಲಾ-ಕಾಲೇಜು ವಿದ್ಯಾರ್ಥಿ ಸಂಘವು ಹಿರಿಯ ನಾಗರಿಕರನ್ನು ಸನ್ಮಾನಿಸುವ ಸಮಾರಂಭ ಹಮ್ಮಿಕೊಂಡಿತ್ತು. ಹಂಪನಹಳ್ಳಿ ತಿಮ್ಮೇಗೌಡ, ಗಂಡಸಿ ಗೌಡ, ಜಿ.ಆರ್.ಮಂಜೇಶ್, ಜಿ.ಎನ್.ನಾಗರಾಜು , ಎಲ್. ರಂಗಪ್ಪ, ಎಸ್. ಆರ್.ವಿಜಯಕುಮಾರ್, ತಿಮ್ಮಪ್ಪ ಶೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯರ ಜ್ಞಾನ ಸಮಾಜಕ್ಕೆ ಅತ್ಯಮೂಲ್ಯ ಆಸ್ತಿ
  • ಜಾನಪದ ಸಾಹಿತಿ ಡಾ.ಹಂಪನಹಳ್ಳಿ ತಿಮ್ಮೇಗೌಡ ಹೇಳಿಕೆ
ಹಾಸನ: ಹಿರಿಯರು ಬದುಕಿದ ರೀತಿ ಮತ್ತು ಅವರ ಅನುಭವ, ಜ್ಞಾನ ಸಮಾಜಕ್ಕೆ ಅತ್ಯಮೂಲ್ಯ ಆಸ್ತಿ. ಹಿರಿಯರು ತಮ್ಮ ಅನುಭವ, ನೈತಿಕ ಮೌಲ್ಯಗಳು, ಸಂಸ್ಕಾರದ ಮಾತುಗಳನ್ನು ಇಂದಿನ ಯುವ ಪೀಳಿಗೆಗೆ ಧಾರೆ ಎರೆಯಬೇಕೆಂದು ಜಾನಪದ ಸಾಹಿತಿ ಡಾ.ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.
ಶಾಂತಿಗ್ರಾಮ ಹಳೆಯ ಶಾಲಾ-ಕಾಲೇಜು ವಿದ್ಯಾರ್ಥಿ ಸಂಘವು ಇತ್ತೀಚೆಗೆ ಏರ್ಪಡಿಸಿದ್ದ ಹಿರಿಯ ನಾಗರಿಕರನ್ನು ಸನ್ಮಾನಿಸುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸ್ವಾವಲಂಬಿ ಬದುಕು ಕಟ್ಟಿ ಕೊಳ್ಳುವ ಧಾವಂತದಲ್ಲಿ ಇಂದಿನ ಯುವಕರು ಹಿರಿಯರನ್ನು ಮರೆಯುತ್ತಿದ್ದಾರೆ. ಹಿರಿಯರನ್ನು ಆಲಕ್ಷಿಸದೆ ಗೌರವವಾಗಿ ಕಾಣಬೇಕು ಎಂದರು ಹೇಳಿದರು.
ಹಾಸನ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಮಾತನಾಡಿ, ಹಿರಿಯರ ಮಾರ್ಗದರ್ಶನ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ಆಗಲಿದೆ. ಹಿರಿಯರನ್ನು ಪ್ರೀತಿ, ಗೌರವ ನೀಡಿ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ಎಂದರು.
ಸಂಘದ ಉಪಾಧ್ಯಕ್ಷ ಗಂಡಸಿ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ಜಿ.ಆರ್.ಮಂಜೇಶ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಸಂಘವು ಕೈಗೊಂಡಿರುವ ಸಮಾಜಮುಖಿ ಕಾರ್ಯಗಳನ್ನು ವಿವರಿಸುತ್ತಾ, ಅತಿಥಿಗಳ ಪರಿಚಯ ಮಾಡಿದರು.
ಸಂಘದ ವತಿಯಿಂದ ಹಿರಿಯರಾದ ದಾಸಾಬೊಯಿ, ಬೋರೇಗೌಡ, ಜಿ.ಟಿ.ತಿಮ್ಮಪ್ಪಶೆಟ್ಟಿ, ಸೋಮಶೇಖರ್, ಮತ್ತು ಎ.ಆರ್. ಕೃಷ್ಣಯ್ಯ ಅವರುಗಳನ್ನು ಸನ್ಮಾನಿಸಲಾಯಿತು.
ಹಾಸನ ಜಿಲ್ಲಾ ಸೈನಿಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಜಿ.ಎನ್.ನಾಗರಾಜು, ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ರಂಗಪ್ಪ, ಎಸ್.ಆರ್.ವಿಜಯಕುಮಾರ್, ತಿಮ್ಮಪ್ಪ ಶೆಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net