ಕೋಟೆ ಶ್ರೀಕನ್ನಿಕ ಪರಮೇಶ್ವರಿ ದೇವಾಲಯದ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಮಾತನಾಡಿ, ಅಷ್ಟಲಕ್ಷ್ಮಿಯ ಎಂಟು ಸ್ವರೂಪಗಳ ಪ್ರತೀಕವಾಗಿ ವಿಶೇಷ ಕಲಶಗಳನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸುತ್ತಿದ್ದು, ಪೂಜೆಯಲ್ಲಿ ಆದಿಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿ ಹಾಗೂ ಧೈರ್ಯಲಕ್ಷ್ಮಿಯರಿಗೆ ವಿಶೇಷ ಅರ್ಚನೆ, ಕುಂಕುಮಾರ್ಚನೆ ಮತ್ತು ಅಷ್ಟೋತ್ತರ ಶತನಾಮಾವಳಿ ಪಾರಾಯಣ ನಡೆಸಲಾಯಿತು. ಅಧಿಕಮಾಸದಲ್ಲಿ ದೇವಿ ಆರಾಧನೆಗೆ ವಿಶೇಷ ಮಹತ್ವವಿದ್ದು, ಈ ಸಂದರ್ಭ 33 ಬಗೆಯ ವಿವಿಧ ಸಿಹಿ ತಿನಿಸುಗಳನ್ನು ಅಮ್ಮನವರಿಗೆ ನೈವೇದ್ಯ ಮಾಡಿ 33 ಕೋಟಿ ದೇವತೆಗಳನ್ನು ಸ್ಮರಿಸಿ ಲೋಕಕ್ಷೇಮ, ಕುಟುಂಬದ ಸುಖ-ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಗುವುದು ಮತ್ತು ಪೂಜಾ ಶಾಸದ ಪ್ರಕಾರ ಅಷ್ಟಲಕ್ಷ್ಮಿ ಪೂಜೆಯಿಂದ ಧನ, ಧಾನ್ಯ, ಆರೋಗ್ಯ, ವಿದ್ಯೆ, ಧೈರ್ಯ, ವಿಜಯ ಹಾಗೂ ಕುಟುಂಬಕ್ಕೆ ಅಭಿವೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಇದೆ ಎಂದರು.