ಮಹನೀಯರ ವಿಚಾರ ಇಂದಿಗೂ ಪ್ರಸ್ತುತ

ಬೇಲೂರು ತಾಲೂಕಿನ ಮದಘಟ್ಟ ಸಮೀಪದ ಗಾಂಧಾರ ಬುದ್ಧ ವಿಹಾರದಲ್ಲಿ ಶುಕ್ರವಾರದ ಶ್ರಾವಣ ಬುದ್ಧ ಪೂರ್ಣಿಮೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಬೇಲೂರು ತಾಲೂಕಿನ ಮದಘಟ್ಟ ಸಮೀಪದ ಗಾಂಧಾರ ಬುದ್ಧ ವಿಹಾರದಲ್ಲಿ ಶುಕ್ರವಾರದ ಶ್ರಾವಣ ಬುದ್ಧ ಪೂರ್ಣಿಮೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಹೇಳಿಕೆ

ಬೇಲೂರು:

ತಾಲೂಕಿನ ಮದಘಟ್ಟ ಸಮೀಪದ ಗಾಂಧಾರ ಬುದ್ಧ ವಿಹಾರದಲ್ಲಿ ಶುಕ್ರವಾರ ಶ್ರಾವಣ ಬುದ್ಧ ಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಧಮ್ಮ ಸಂದೇಶ ಹಾಗೂ ಪ್ರವಚನ ಕಾರ್ಯಕ್ರಮದೊಂದಿಗೆ ಭಕ್ತರು ಬುದ್ಧರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರಾವಣ ಬುದ್ಧ ಪೂರ್ಣಿಮೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಬುದ್ಧ, ಬಸವ, ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆ, ಕರುಣೆ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂದೇಶ ನೀಡಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ ಮನುಕುಲಕ್ಕೆ ಮಾದರಿಯಾಗಿದ್ದು, ಯುವಜನತೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಬೌದ್ಧ ಉಪಾಸಕ ಅರವಿಂದ್ ಗಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚಂಚಲ ಕುಮಾರಸ್ವಾಮಿ, ಗಾಂಧಾರ ಬುದ್ಧ ವಿಹಾರದ ಪ್ರಧಾನ ಕಾರ್ಯದರ್ಶಿ ವಕೀಲ ರಾಜು ಅರೇಹಳ್ಳಿ, ಮುಖಂಡರಾದ ಈಶ್ವರ ಪ್ರಸಾದ್, ಕುಮಾರ್‌ಗುಪ್ತ, ಮಂಜು ಮೊಗಸಾವರ, ಶಿವರಾಜು, ಹರೀಶ್ ಮೇಕೆದಾಟು, ಕೌರಿ ಕುಮಾರ್, ಚಂದ್ರು ಬಹುಜನ್, ಗಂಗಾಧರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net