ಕಂದಾಚಾರ ವಿರುದ್ಧ ಜಾಗೃತಿ ಮೂಡಿಸಿದ ಮಹನೀಯ

ಅರಕಲಗೂಡು ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ  ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಶಾಸಕ ಎ.ಮಂಜು ಪುಷ್ಪಾರ್ಚನೆ ಮಾಡಿದರು. ಕೆ.ಸಿ.ಸೌಮ್ಯಾ, ಕೃಷ್ಣ, ಸೋಮಶೇಖರ್ ಇತರರಿದ್ದರು.
ಅರಕಲಗೂಡು ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಶಾಸಕ ಎ.ಮಂಜು ಪುಷ್ಪಾರ್ಚನೆ ಮಾಡಿದರು. ಕೆ.ಸಿ.ಸೌಮ್ಯಾ, ಕೃಷ್ಣ, ಸೋಮಶೇಖರ್ ಇತರರಿದ್ದರು.
Published on

ಅರಕಲಗೂಡು:

ಸಮಾಜದಲ್ಲಿ ಅಸಮಾನತೆ, ಜಾತಿ ದ್ವೇಷದ ಗೋಡೆ ಒಡೆದು ಎಲ್ಲರಲ್ಲಿ ಭ್ರಾತೃತ್ವ ಮತ್ತು ಸಮಾನತೆಯ ಪರಿಕಲ್ಪನೆ ಬಿತ್ತಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಆದರ್ಶ ಪೂರ್ಣವಾದದ್ದು. ಎಲ್ಲರಲ್ಲೂ ಮಾನವೀಯತೆಯ ಸದಾಶಯ ಬೆಳೆಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು ಎಂದು ಶಾಸಕ ಎ.ಮಂಜು ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯದಲ್ಲಿ ನಾರಾಯಣಗುರು ಅವರನ್ನು ನಾಣು ಎಂದು ಕರೆಯುತ್ತಿದ್ದರು. ಕೃಷ್ಣ ವೈದ್ಯರ್ ಮತ್ತು ರಾಮನ್ ವೈದ್ಯರ್ ಅವರ ಮಾರ್ಗದರ್ಶನದಲ್ಲಿ ರಾಮಾಯಣ, ಮಹಾಭಾರತ, ಭಾಗವತ ಗ್ರಂಥಗಳ ಅಧ್ಯಯನ ನಡೆಸಿದರು. ನಾಟಿ ಔಷಧ ತಯಾರು ಮಾಡುವುದನ್ನು ಕಲಿತು ವೈದ್ಯಕೀಯ ವೃತ್ತಿಯಲ್ಲಿಯೂ ಪ್ರಾವೀಣ್ಯತೆ ಪಡೆದಿದ್ದರು.
ಶ್ರೀ ನಾರಾಯಣ ಗುರು ಯಾವುದೇ ಪ್ರತ್ಯೇಕ ಧರ್ಮಕ್ಕೆ ಮಾತ್ರ ಸೀಮಿತವಾದ ಯುಗ ಪುರುಷರಾಗದೆ ಎಲ್ಲ ಜಾತಿ ಧರ್ಮದ ನಾಯಕರಾಗಿದ್ದರು. ಎಲ್ಲರ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದರು ಎಂದರು.
ರವೀಂದ್ರ ನಾಥ ಠಾಗೋರ್, ಮಹಾತ್ಮ ಗಾಂಧಿ, ಸ್ವಾಮಿ ಶ್ರದ್ದಾನಂದ, ವಕ್ಕಂ ಮೌಲವಿ ಅವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕೆಳ ವರ್ಗದವರು ದಾರಿಯಲ್ಲಿ ಮುಕ್ತವಾಗಿ ನಡೆಯುವ ಹಕ್ಕಿಗಾಗಿ ವೈಕ್ಕಂ ಸತ್ಯಾಗ್ರಹ ನಡೆಸಿದರು. ಅದೇ ರೀತಿ ದುಂದುವೆಚ್ಚ, ಕಂದಾಚಾರ, ಪ್ರಾಣಿಬಲಿ, ಮದ್ಯಪಾನ, ಮಹಿಳಾ ಶೋಷಣೆ, ಶಿಕ್ಷಣ, ಇತ್ಯಾದಿ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸಿದ್ದರು ಎಂದರು.
ತಹಸೀಲ್ದಾರ್ ಕೆ.ಸಿ. ಸೌಮ್ಯ, ಶಿರಸ್ತೇದಾರ್ ಸೋಮಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net