ವಿಶ್ವ ಹಿಂದೂ ಪರಿಷತ್‌ಬಜರಂಗ ದಳ ಕಾರ್ಯಕರ್ತರು ಪಟ್ಟಣ ಸಮೀಪದ ಗೆಂಡೇಹಳ್ಳಿ ರಸ್ತೆಯಲ್ಲಿರುವ ಕಳಸಿನ ಕೆರೆ ಬೂತಪ್ಪನ ಗುಡಿ ಆವರಣವನ್ನು ಸ್ವಚ್ಛಗೊಳಿಸುತ್ತಿರುವುದು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಭರತ್ ಬಿರಡಹಳ್ಳಿ ಅಭಿಮತ
ಬೇಲೂರು: ಪಟ್ಟಣ ಸಮೀಪದ ಗೆಂಡೇಹಳ್ಳಿ ರಸ್ತೆಯಲ್ಲಿರುವ ಕಳಸಿನಕೆರೆ ಭೂತಪ್ಪನ ಗುಡಿ ಆವರಣವನ್ನು ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಕಾರ್ಯಕರ್ತರು ಭಾನುವಾರ ಶ್ರಮದಾನದ ಮೂಲಕ ಬೆಳೆದಿದ್ದ ಗಿಡ ಗಂಟಿಯನ್ನು ತೆರವುಗೊಳಿಸಿದರು.
ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಭರತ್ ಬಿರಡಹಳ್ಳಿ ಮಾತನಾಡಿ, ಸಮಾಜ ಸೇವೆ ಹಾಗೂ ಪರಿಸರ ಸಂರಕ್ಷಣೆಯಂತಹ ಕಾರ್ಯಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಪಟ್ಟಣ ಸಮೀಪದ ಕಳಸಿನ ಕೆರೆ ಭೂತಪ್ಪನ ಗುಡಿ ಆವರಣ ಹಾಗೂ ಸುತ್ತಮುತ್ತ ಬೆಳೆದಿದ್ದ ಗಿಡ ಗಂಟಿ ಹಾಗೂ ಕಸವನ್ನು ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿದ್ದು, ಇಂತಹ ಸೇವಾ ಕಾರ್ಯಗಳನ್ನು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಸುವ ಉದ್ದೇಶ ಹೊಂದಿದ್ದೇವೆ ಎಂದರು.
ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಿದರೆ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಮಾಡಲು ಸಂಘಟನೆಗೆ ಪ್ರೇರಣೆಯಾಗುತ್ತದೆ. ಅಲ್ಲದೆ ಧಾರ್ಮಿಕ ಸ್ಥಳಗಳಿಗೆ ಬರುವ ಭಕ್ತರು, ಸಾರ್ವಜನಿಕರು ಪೂಜೆ ಅಥವಾ ಸೇವೆಯ ನಂತರ ಪ್ಲಾಸ್ಟಿಕ್, ಕಸ ಕಡ್ಡಿ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಅಲ್ಲಿಯೇ ಬಿಸಾಡದೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿ ಸೂಕ್ತ ಜಾಗದಲ್ಲಿ ಹಾಕುವ ಮೂಲಕ ಸ್ವಚ್ಛತೆ ಕಾಪಾಡಬೇಕು. ನಮ್ಮ ಜವಾಬ್ದಾರಿ ನಮ್ಮದೇ ಎಂಬ ಮನೋಭಾವದಿಂದ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಿ ಕೊಡಬಹುದು ಎಂದರು.
ವಿಶ್ವ ಹಿಂದೂ ಪರಿಷತ್‌ಬಜರಂಗದಳದ ಕಾರ್ಯದರ್ಶಿ ನಾಗೇಶ್, ತಾಲೂಕು ಸಂಯೋಜಕ ಮೋಹನ್, ಪದಾಧಿಕಾರಿಗಳಾದ ಕೃಷ್ಣ, ಶಂಕರ್, ದರ್ಶನ್, ಮುರುಗೇಶ, ಜೀನೇಶ್, ಅಶೋಕ್, ಲೋಕೇಶ್, ರಾಘು ಸೇರಿದಂತೆ ಇತರರಿದ್ದರು.