ಶ್ರೀ ಕುವೆಂಪು ಮಹಿಳಾ ಸಂಘದ ಡಿಸೆಂಬರ್ ತಿಂಗಳ ಮಾಸಿಕ ಸಭೆ ನಗರದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ರಮೇಶ್, ಜಯಾ ರಮೇಶ್, ಸುನಂದಾ ಕೃಷ್ಣ, ಲೀಲಾವತಿ, ಪದ್ಮಾ ಶರ್ಮ, ಶಾಂತಲಾದೇವಿ, ಕಲಾ ನರಸಿಂಹ, ಸಾವಿತ್ರಿ, ಕಾಮಾಕ್ಷಿ, ರಾಜೇಶ್ವರಿ, ಹೇಮಲತಾ, ಚೇತನಾ, ಶೈಲಾ, ಮಾಲಿನಿ, ಸುಜಾತ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವೇಗದ ಸಮಾಜದಲ್ಲಿ ನೆಮ್ಮದಿಯಾಗಿ ಬದುಕುವುದೇ ಸವಾಲು
ಶ್ರೀ ಕುವೆಂಪು ಮಹಿಳಾ ಸಂಘದ ಅಧ್ಯಕ್ಷೆ ಜಯಾ ರಮೇಶ್ ಅಭಿಮತ
ಹಾಸನ: ಶ್ರೀ ಕುವೆಂಪು ಮಹಿಳಾ ಸಂಘದ ಡಿಸೆಂಬರ್ ತಿಂಗಳ ಮಾಸಿಕ ಸಭೆ ನಗರದ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಹೀಲಿಂಗ್ ಥೆರಪಿಯ ಮಾರ್ಗದರ್ಶಕ ರಮೇಶ್ ಉತ್ತಮ ಆರೋಗ್ಯ ಕುರಿತು ಮಾಹಿತಿ ನೀಡಿದರು. ಹೀಲಿಂಗ್ ಥೆರಪಿಯ ಮಹತ್ವ, ಅಗತ್ಯ ಬಗ್ಗೆ ಸಂವಾದ ನಡೆಸಿದರು.
ಸಂಘದ ಅಧ್ಯಕ್ಷೆ ಜಯಾ ರಮೇಶ್ ಮಾತನಾಡಿ, ಇಂದಿನ ವೇಗದ ಬದುಕಿನಲ್ಲಿ ಶಾಂತಿಯಾಗಿ ಬಾಳುವುದು ಬಹುಜನರಿಗೆ ಸವಾಲಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಕೆಲಸದ ಒತ್ತಡ ಸಾಮಾನ್ಯವಾಗಿದೆ. ಹಾಗಾಗಿ ಔಷಧ ಅವಶ್ಯಕತೆಯಿಲ್ಲದೆ ಹೀಲಿಂಗ್ ಥೆರಪಿಯ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.
ಕುವೆಂಪು ಮಹಿಳಾ ಸಂಘದ ಸುನಂದಾ ಕೃಷ್ಣ, ಲೀಲಾವತಿ, ಪದ್ಮಾ ಶರ್ಮ, ಶಾಂತಲಾದೇವಿ, ಕಲಾ ನರಸಿಂಹ, ಸಾವಿತ್ರಿ, ಕಾಮಾಕ್ಷಿ, ರಾಜೇಶ್ವರಿ, ಹೇಮಲತಾ, ಚೇತನಾ, ಶೈಲಾ, ಮಾಲಿನಿ, ಸುಜಾತಾ, ಮಣಿ, ಭಾಗ್ಯಾ, ಲಕ್ಷ್ಮೀ ಇತರರಿದ್ದರು.