‘ಲೋಕಲ್ ಫೈಟ್’ಗೆ ಸಜ್ಜಾಗುತ್ತಿದೆ ಅಖಾಡ

‘ಲೋಕಲ್ ಫೈಟ್’
‘ಲೋಕಲ್ ಫೈಟ್’
Published on

ಪ್ರಮುಖ ಮುಖ್ಯಾಂಶಗಳು

  • ‘ಲೋಕಲ್ ಫೈಟ್’ಗೆ ಸಜ್ಜಾಗುತ್ತಿದೆ ಅಖಾಡ
  • ಗ್ರಾಪಂ ಚುನಾವಣೆಗೆ ಆಯೋಗದಿಂದ ಸಿದ್ಧತೆ
  • ಹಾಸನದ 261 ಗ್ರಾಪಂಗಳಿಗೆ 3,541 ಸ್ಥಾನ ನಿಗದಿ
ಹಾಸನ: ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸಜ್ಜಾಗಿರುವ ರಾಜ್ಯ ಚುನಾವಣಾ ಆಯೋಗವು ರಾಜ್ಯದ ಎಲ್ಲ ಜಿಲ್ಲೆಗಳ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಅದರಂತೆ ಜಿಲ್ಲೆಯ ಒಟ್ಟು 261 ಗ್ರಾಮ ಪಂಚಾಯಿತಿಗಳಿಗೆ 3,541 ಸ್ಥಾನಗಳನ್ನು ನಿಗದಿ ಮಾಡಲಾಗಿದೆ.
ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ, ಕ್ಷೇತ್ರಗಳ ಮರುವಿಂಗಡಣೆ ಮಾಡಲು ಕ್ಷೇತ್ರ ಮರುವಿಂಗಡಣಾ ಆಯೋಗ ಸೂಚನೆ ನೀಡಿದ್ದರಿಂದ ಗ್ರಾಪಂ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಮಯ 1993ರ ಪ್ರಕರಣ 5ರಡಿ ಹಾಗೂ 308 (ಇ)(ಎಫ್)ಪ್ರಕರಣದಡಿ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲೆಯ ಎಂಟು ತಾಲೂಕುಗಳ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಜತೆಯಲ್ಲೇ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ನಡೆಸಲಾಗುತ್ತದೆ ಎಂದು ಹೇಳಲಾಗುತ್ತು. ಆದರೆ, ಗ್ರಾಪಂ ಚುನಾವಣೆಯು ಪಕ್ಷದ ಚಿಹ್ನೆಯಲ್ಲಿ ನಡೆಯದ ಕಾರಣ ಯಾವುದೇ ಸಂದರ್ಭದಲ್ಲಿ ದಿನಾಂಕ ನಿಗದಿಪಡಿಸಿ ಚುನಾವಣೆ ನಡೆಸುವ ಸಾಧ್ಯತೆ ಇದೆ.
ಪಂಚಾಯತ್‌ರಾಜ್ ಕಾಯ್ದೆ ಪ್ರಕಾರ ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ಆರು ತಿಂಗಳೊಳಗೆ ಚುನಾವಣೆ ನಡೆಸುವುದು ಅನಿವಾರ್ಯ ಆಗಿರುವ ಕಾರಣ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಬದಿಗೊತ್ತಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ಸಾಧ್ಯತೆ ನಿಚ್ಚಳವಾಗಿದೆ.
ಇದರಿಂದಾಗಿ ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗವು ಸದಸ್ಯ ಸ್ಥಾನಗಳ ಸಂಖ್ಯೆಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸುವ ಜತೆಗೆ, ಏನಾದರೂ ವ್ಯತ್ಯಾಸ ಇದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಶುಕ್ರವಾರದವರೆಗೂ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಹಲವು ತಿಂಗಳಿಂದ ಸ್ಥಳೀಯ ಸಮರ ಎದುರು ನೋಡುತ್ತಿರುವ ಹಳ್ಳಿಗಳಲ್ಲಿ ಸುಡುಬಿಸಿಲಿನ ಜತೆಗೆ, ರಾಜಕೀಯ ಬಿಸಿಯೂ ಏರಲಿದೆ.
ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರ ಐದು ವರ್ಷಗಳ ಅವಧಿ ಮುಗಿದು ಆಡಳಿತಾಧಿಕಾರಿಗಳು ಐದು ವರ್ಷಗಳ ಕಾಲ ಕಾರ್ಯಭಾರ ನಡೆಸಿರುವುದು ದಾಖಲೆಯಾಗಿದೆ. ಗ್ರಾಪಂ ಸದಸ್ಯರ ಅವಧಿಯು ಜನವರಿ ಅಂತ್ಯದಲ್ಲಿ ಮುಕ್ತಾಯವಾಗಿದೆ. ಪಂಚಾಯತ್‌ರಾಜ್ ಕಾಯ್ದೆ ಪ್ರಕಾರ ಮೂರರಿಂದ 6 ತಿಂಗಳ ಒಳಗೆ ಚುನಾವಣೆ ನಡೆಸುವುದು ಆಯೋಗಕ್ಕೆ ಅನಿವಾರ್ಯವಾಗಿದೆ.
ಮೀಸಲಾತಿ ಹಂಚಿಕೆ ಬಾಕಿ:
ಗ್ರಾಮ ಪಂಚಾಯಿತಿಗಳ ಜನಸಂಖ್ಯೆಗೆ ಅನುಗುಣವಾಗಿ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಆಕೇಪಣೆ ಸಲ್ಲಿಕೆಯ ಬಳಿಕ ಆಯಾಯ ಗ್ರಾಪಂ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಶೇ.50ರಷ್ಟು ಮಹಿಳಾ ಮೀಸಲಾತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರಗರ್ವ-ಎ, ಪ್ರವರ್ಗ ವರ್ಗ-ಬಿ, ಸಾಮಾನ್ಯ ಕ್ಷೇತ್ರಗಳಿಗೆ ಮೀಸಲಾತಿ ಹಂಚಿಕೆ ಮಾಡಬೇಕಾಗಿದೆ. ಈ ಮೀಸಲಾತಿ ಹಂಚಿಕೆ ಮಾಡುತ್ತಿದ್ದಂತೆ ಸ್ಥಳೀಯ ಸಮರಕ್ಕೆ ವೇದಿಕೆ ಸಜ್ಜಾಗುವುದು ನಿಶ್ಚಿತವಾಗಿದೆ.
ಯಾವ ಗ್ರಾಮ ಪಂಚಾಯಿತಿಗೆ ಎಷ್ಟು ಸ್ಥಾನ:
ಆಲೂರು ತಾಲೂಕಿನ ಬೈರಾಪುರ-15, ಹುಣಸವಳ್ಳಿ-13, ದೊಡ್ಡಕಣಗಾಲು-10, ಕಣತೂರು-12, ಮಡಬಲು-18, ಪಾಳ್ಯ-18, ಮಗ್ಗೆ-15, ಮಲ್ಲಾಪುರ-19, ಕಾರಗೋಡು-18,ಅಬ್ಬನ-8, ಕುಂದೂರು-6, ಕದಾಳು-13, ಗಂಜಿಗೆರೆ-10, ಹಂಚೂರು-11 ಸ್ಥಾನಗಳನ್ನು ನಿಗದಿ ಪಡಿಸಲಾಗಿದೆ.
ಅರಕಲಗೂಡು ತಾಲೂಕಿನ ವಡ್ಡರಹಳ್ಳಿ-13, ಹೆಬ್ಬಾಲೆ-15, ಗಂಜಗೂಡು-13, ಬೈಚನಹಳ್ಳಿ-15, ಹೊನ್ನವಳ್ಳಿ-13, ಕತ್ತಿಮಲ್ಲೇನಹಳ್ಳಿ 9, ವಿಜಾಪುರ ಅರಣ್ಯ-15, ಮಲ್ಲಿಪಟ್ಟಣ-12, ಹೊಳಲಗೋಡು-11, ದೊಡ್ಡಬೆಮ್ಮತ್ತಿ-14, ಹುಲಿಕಲ್-11, ದೊಡ್ಡಮಗ್ಗೆ-13, ಸಂತೆಮರೂರು-18, ಯಲಗತವಳ್ಳಿ-16, ಬೆಳವಾಡಿ-19, ಅಗ್ರಹಾರ-10, ಚಿಕ್ಕಹಳ್ಳಿ-21, ಕೊಣನೂರು-21, ಹಂಡ್ರಂಗಿ-13, ಬನ್ನೂರು-11, ಸರಗೂರು-12, ಕಟ್ಟೆಪುರ-15, ರಾಮನಾಥಪುರ-20, ಬಸವಪಟ್ಟಣ-15, ಕಾಳೇನಹಳ್ಳಿ-17, ಕೇರಳಾಪುರ-16, ರುದ್ರಪಟ್ಟಣ-13, ಲಕ್ಕೂರು-13, ಆಲದಹಳ್ಳಿ-9, ಹನ್ಯಾಳು-12, ಕಡವಿನ ಹೊಸಹಳ್ಳಿ-11, ತರಿಗಳಲೆ-10, ಮೋಕಲಿ-11, ಕೊರಟಿಕೆರೆ-11, ಹೆಗ್ಗಡಿಹಳ್ಳಿ-9 ಸ್ಥಾನಗಳನ್ನು ನಿಗದಿ ಮಾಡಲಾಗಿದೆ.
ಅರಸೀಕೆರೆ ತಾಲೂಕಿನ ಹಾರನಹಳ್ಳಿ-15, ಜಾವಗಲ್-23, ಬಂದೂರು-13, ಅಗ್ಲುಂಡ-15, ಕೋಳಗುಂದ-18, ಮುರುಂಡಿ-12, ಹಬ್ಬನಘಟ್ಟ-16, ರಂಗಾಪುರ-16, ಬೆಳಗುಂಬ-20, ಬೆಂಡೇಕೆರೆ-14, ಲಾಳನಕೆರೆ-15, ಕುರುವಂಕ-15, ಕೆಂಕೆರೆ-14, ಬಾಗೇಶಪುರ-12, ಜೆಸಿಪುರ-14, ಶಂಕರನಹಳ್ಳಿ-15, ಹಿರಿಯೂರು-15, ಹೆಗ್ಗಟ್ಟ-12, ಗೀಜಿಹಳ್ಳಿ-11, ಕಲ್ಗುಂಡಿ-17, ಶ್ಯಾನೇಗೆರೆ-22, ಕಾಮಸಮುದ್ರ-14, ಕರಗುಂದ-15, ಯಡುವನಹಳ್ಳಿ-11, ದುಮ್ಮೇನಹಳ್ಳಿ-23, ಕಣಕಟ್ಟೆ-14, ಮಾಡಾಳು-11, ಪುರಲೇಹಳ್ಳಿ-19, ನರಸೀಪುರ-12, ಕಾಚಿಘಟ್ಟ-11, ಹಂದ್ರಾಳು-12, ನೇರ್ಲಗೆ-14, ತಳಲೂರು-22, ಕಲ್ಯಾಡಿ-9, ಚಗಚಗೆರೆ-15, ಗಂಡಸಿ-12, ದೊಡ್ಡಮೇಟಿಕುರ್ಕೆ-14, ರಾಂಪುರ-12, ಜಾಜುರು-17, ಅರಕೆರೆ-13, ಬಾಗೀವಾಳು-10, ಮುದುಡಿ 13, ಕೊಂಡೇನಾಳು-11, ಉಂಡಿಗನಾಳು-11 ಸ್ಥಾನಗಳಿವೆ.
ಬೇಲೂರು ತಾಲೂಕಿನ ಬಂಟೇನಹಳ್ಳಿ 15, ಹಳೇಬೀಡು 20, ಕೋಗಿಲೆಮನೆ-8, ಆಂದಲೆ-7, ಚಟಚಟನಹಳ್ಳಿ-8, ಯಲಹಂಕ 12, ರಾಜನಶಿರಿಯೂರು-18, ಘಟ್ಟದಹಳ್ಳಿ-17, ಗಂಗೂರು-9, ಕೋಡಿಹಳ್ಳಿ-12, ಅರೇಹಳ್ಳಿ-22, ಲಕ್ಕುಂದ-10, ದಬ್ಬೆ-6, ಯಮಸಂಧಿ-6, ಹನುಗನಹಳ್ಳಿ-9, ಚೀಕನಹಳ್ಳಿ-7, ಸನ್ಯಾಸಿಹಳ್ಳಿ-10, ಇಬ್ಬೀಡು-14, ಕುಶಾವರ-9, ಗೋಣಿಸೋಮನಹಳ್ಳಿ-12, ಹೆಬ್ಬಾಳು-14, ಮಘಟ್ಟ-9, ಬಿಕ್ಕೋಡು-12, ಮಲಸಾವರ-7, ಅನುಘಟ್ಟ-7, ತುಂಬದೇವನಹಳ್ಳಿ-7, ಹಗರೆ-20, ಹುಲುಗುಂಡಿ-9, ಚಿಕ್ಕಮೇದೂರು- 13, ಕೆಸಗೋಡು-7, ಹನಿಕೆ-10, ಸವಾಸಿಹಳ್ಳಿ-13, ಅಡಗೂರು-12, ನಾರಾಯಣಪುರ-17, ನಾರ್ವೆಪೇಟೆ-8, ಕಳ್ಳೇರಿ-13 ಸ್ಥಾನಗಳನ್ನು ನಿಗದಿ ಪಡಿಸಲಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ಜುಟ್ಟನಹಳ್ಳಿ-20, ನವಿಲೆ-12, ನುಗ್ಗೇಹಳ್ಳಿ-18, ಅಣತಿ-14, ಕೆಂಬಾಳು-15, ಹಿರೀಸಾವೆ-23, ಬಾಗೂರು-16, ಬಳದರೆ-18, ಜಿನ್ನೇನಹಳ್ಳಿ-14, ಮತಿಘಟ್ಟ-14, ಜಂಬೂರು-15, ಮಟ್ಟನವಿಲೆ-16, ತಗಡೂರು-14, ಅನೇಕೆರೆ-19, ನಲ್ಲೂರು-16, ದಿಂಡಗೂರು-15, ಸಂತೇಶಿವರ-15, ಬರಗೂರು-17, ಗುಲಸಿಂದ-16, ದಮ್ಮನಿಗಲ-13, ಬೆಕ್ಕ-14, ಬಾಳಗಂಚಿ-10, ಅಕ್ಕನಹಳ್ಳಿ-16, ಕುಂದೂರು-15, ಜನಿವಾರ-12, ಡಿ.ಕಾಳೇನಹಳ್ಳಿ-13, ಕಾಂತರಾಜಪುರ-18, ದಿಡಿಗ-21, ನೊರನಕ್ಕಿ-16, ಗೌಡಗೆರೆ-19, ಕಲ್ಕೆರೆ-19, ಕುಂಬೇನಹಳ್ಳಿ-13, ಸಂತೇನಹಳ್ಳಿ-15, ಸುಂಡಹಳ್ಳಿ-14, ಕಬ್ಬಳ್ಳಿ-14, ಬ್ಯಾಡರಹಳ್ಳಿ-15, ಎಂ.ಶಿವರ-14, ಕಾರೇಹಳ್ಳಿ-11, ಬೆಳಗಿಹಳ್ಳಿ-12, ಶ್ರವಣಬೆಳಗೊಳ-17, ಕಬ್ಬಾಳು ಗ್ರಾಮ ಪಂಚಾಯಿತಿಗಳಿಗೆ 8 ಸ್ಥಾನಗಳಿವೆ.
ಹಾಸನ ತಾಲೂಕಿನ ಅಟ್ಟಾವರ ಹೊಸಹಳ್ಳಿ-16, ಅಂಬುಗ 8, ಅಂಕಪುರ 14, ಬಸವಾಘಟ್ಟ-12, ಬೈಲಹಳ್ಳಿ-13, ಚನ್ನಂಗಿಹಳ್ಳಿ-13, ದೊಡ್ಡಗೇಣಿಗೆರೆ-11, ದುದ್ದ-17, ಗೊರೂರು-10, ಹನುಮಂತಪುರ-15, ಹೆರಗು-13, ಹೊನ್ನಾವರ-13, ಹೂವಿನಹಳ್ಳಿ ಕಾವಲ್-14, ಜಾಗರವಳ್ಳಿ-11, ಕಬ್ಬಳ್ಳಿ-15,, ಕಂದಲಿ-14, ಕಾರ್ಲೆ-17, ಕಟ್ಟಾಯ-15, ಕೋರವಂಗಲ-14, ಕೌಶಿಕ-17, ಕುದುರಗುಂಡಿ-13, ಮಡೇನೂರು-14, ಮರ್ಕುಲಿ-19, ಮಳಗೋಡು-11, ಮೊಸಳೆ ಹೊಸಹಳ್ಳಿ-17, ನಿಟ್ಟೂರು-11, ಸಾಲಗಾಮೆ-16, ಸೀಗೆ-18, ಶಂಕರನಹಳ್ಳಿ-11, ಶಾಂತಿಗ್ರಾಮ-19, ಶೆಟ್ಟಿಹಳ್ಳಿ-15, ಹಾಲುವಾಗಿಲು-8, ತೇಜೂರು-12, ಉಗನೆ-17, ಯಲಗುಂದ-13, ಗಾಡೇನಹಳ್ಳಿ-10 ಸ್ಥಾನಗಳಿವೆ.
ಹೊಳೆನರಸೀಪುರ ತಾಲೂಕಿನ ಮಳಲಿ-14, ದೊಡ್ಡಕುಂಚೆ-15, ಹರಿಹರಪುರ-11, ಹಳೇಕೋಟೆ-8, ಹಂಗರಹಳ್ಳಿ-10, ಕಟ್ಟೆಬೆಳಗುಲಿ-14, ಬಾಗೀವಾಳು-19, ಕೋಡಿಹಳ್ಳಿ-17, ಮೂಡಲಹಿಪ್ಪೆ-21, ಮಲ್ಲಪ್ಪನಹಳ್ಳಿ-16, ಐಚನಹಳ್ಳಿ-19, ಸಂಕನಹಳ್ಳಿ-10, ಪಡವಲಹಿಪ್ಪೆ-13, ದೊಡ್ಡಬ್ಯಾಗತವಳ್ಳಿ-11, ಕೆರಗೋಡು-15, ತಾತನಹಳ್ಳಿ-14, ದೊಡ್ಡಕಾಡನೂರು-23, ಶ್ರವಣೂರು-21, ದೊಡ್ಡಹಳ್ಳಿ-12, ನಗರನಹಳ್ಳಿ-17, ಅನೆಕನ್ನಂಬಾಡಿ-12, ಹಳ್ಳಿಮೈಸೂರು-16, ಕ್ಯಾತನಹಳ್ಳಿ-16, ನಿಡುವಣಿ-17, ಬಿದರಕ್ಕ-18, ಓಡನಹಳ್ಳಿ-13 ಸ್ಥನಗಳನ್ನು ನಿಗದಿ ಮಾಡಲಾಗಿದೆ.
ಸಕಲೇಶಪುರ ತಾಲೂಕಿನ ಮಳಲಿ-14, ಹೆಬ್ಬಸಾಲೆ-14, ಬ್ಯಾಕರವಳ್ಳಿ-12, ಹಲಸುಲಿಗೆ-9, ಬಿರಡಹಳ್ಳಿ-11, ಕ್ಯಾನಹಳ್ಳಿ-7, ಆನೆಮಹಲ್-10, ಯಸಳೂರು-10, ಹೊಸೂರು-12, ಚಂಗಡಿಹಳ್ಳಿ-9, ಐಗೂರು-8, ಹೆತ್ತೂರು-10, ಹೊಂಗಡಹಳ್ಳ-6, ವಳಲಹಳ್ಳಿ-8, ಕುರುಭತ್ತೂರು-11, ಉದೇವಾರ-8, ಬಾಳ್ಳು-16, ಬಾಗೆ-12, ಕುಣಿಗನಹಳ್ಳಿ-11, ಹಾನುಬಾಳು-13, ಕ್ಯಾಮನಹಳ್ಳಿ-13, ಹೆಗ್ಗದ್ದೆ-10, ದೇವಾಲದಕೆರೆ-8, ಬೆಳಗೋಡು-14, ವಣಗೂರು-9, ಉಚ್ಚಂಗಿ ಗ್ರಾಮ ಪಂಚಾಯಿತಿಗೆ 10 ಸ್ಥಾನಗಳನ್ನು ನಿಗದಿ ಮಾಡಲಾಗಿದೆ.
((ಜಿಲ್ಲೆಯ ಗ್ರಾಮ ಪಂಚಾಯಿತಿ ವಿವರ))
ತಾಲೂಕು ಗ್ರಾ.ಪಂ. ಸಂಖ್ಯೆ ಸದಸ್ಯರ ಸಂಖ್ಯೆ
ಆಲೂರು 15 203
ಅರಕಲಗೂಡು 36 488
ಅರಸಿಕೇರಿ 44 639
ಬೇಲೂರು 37 423
ಚನ್ನರಾಯಪಟ್ಟಣ 41 626
ಹಾಸನ 36 496
ಹೊಳೆನರಸೀಪುರ 26 392
ಸಕಲೇಶಪುರ 26 275
ಒಟ್ಟು 261 3,541
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net