ವ್ಯಾಕರಣ ಬದ್ಧ ಕನ್ನಡಕ್ಕೆ ವಿದ್ಯಾರ್ಥಿಗಳು ಒತ್ತು ನೀಡಲಿ

ಹಿರೀಸಾವೆಯ ಶ್ರೀಕಂಠಯ್ಯ ವೃತ್ತದ ಆಟೋ ನಿಲ್ದಾಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ಪರಮೇಶ್ ಕಸ್ತೂರಪ್ಪ, ಮಹೇಶ್, ರೂಪಾ ಬಿರಾದಾರ್, ವೆಂಕಟೇಶ್, ರವಿಕುಮಾರ್, ಪ್ರಭಾಕರ್, ಮಾರುತಿ ಮಂಜು ಇದ್ದರು.
ಹಿರೀಸಾವೆಯ ಶ್ರೀಕಂಠಯ್ಯ ವೃತ್ತದ ಆಟೋ ನಿಲ್ದಾಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ಪರಮೇಶ್ ಕಸ್ತೂರಪ್ಪ, ಮಹೇಶ್, ರೂಪಾ ಬಿರಾದಾರ್, ವೆಂಕಟೇಶ್, ರವಿಕುಮಾರ್, ಪ್ರಭಾಕರ್, ಮಾರುತಿ ಮಂಜು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • kannada flag hosting
ಹಿರೀಸಾವೆ: ಮಾತೃಭಾಷೆಯನ್ನು ಕನ್ನಡಿಗರಾದ ನಾವು ವಿಶ್ವದೆತ್ತರಕ್ಕೆ ಎತ್ತಿ ಹಿಡಿಯಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಶ್ರೀಕಂಠಯ್ಯ ವೃತ್ತದಲ್ಲಿ ಶ್ರೀ ಚೌಡೇಶ್ವರಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡದ ಅಭಿಮಾನವನ್ನು ರಾಜ್ಯದಲ್ಲೆಡೆ ಎತ್ತಿ ತೋರಿಸುವ ಸಂಘಟನೆ ಇದ್ದರೆ ಅದು ಆಟೋ ಚಾಲಕರು ಹಾಗೂ ಮಾಲೀಕರ ಸಂಘ ಎಂದರು.
ನಾಡು ನುಡಿ, ನೆಲ ಜಲದ ವಿಚಾರ ಬಂದಾಗ ನಾವೆಲ್ಲರೂ ಒಗ್ಗೂಡಿ ನಿಲ್ಲುವ ಭಾವನೆ ಬೆಳೆಸಿಕೊಳ್ಳಬೇಕು. ವ್ಯವಹಾರಿಕವಾಗಿ ಬೇರೆ ಭಾಷೆಗಳು ಮುಖ್ಯವಾಗಿದೆಯಾದರೂ ತಾಯಿ ಭಾಷೆ ಕನ್ನಡಕ್ಕೆ ಯಾವುದೇ ರೀತಿಯಲ್ಲಿ ಅಪಮಾನ ಆಗದ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ಕನ್ನಡಿಗರದ್ದು. ವ್ಯಾಕರಣ ಬದ್ಧವಾದ ಕನ್ನಡಕ್ಕೆ ಮಾನ್ಯತೆ ಕೊಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಪರಮೇಶ್ ಕಸ್ತೂರಪ್ಪ, ಸೊಸೈಟಿ ಅಧ್ಯಕ್ಷ ಮಹೇಶ್, ಆರಕ್ಷಕ ಠಾಣಾಧಿಕಾರಿ ರೂಪಾ ಬಿರಾದಾರ್, ವೆಂಕಟೇಶ್, ರವಿಕುಮಾರ್, ಪ್ರಭಾಕರ್, ಮಾರುತಿ ಮಂಜು, ಆಟೋ ಚಾಲಕರ ಸಂಘದ ಅಧ್ಯಕ್ಷ ಸುರೇಶ್, ಸೊಸೈಟಿ ಮಾಜಿ ಅಧ್ಯಕ್ಷೆ ಗೀತಾ ಕಸ್ತೂರಿ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net