ಹಾಸನಾಂಬ ದೇವಾಲಯದಲ್ಲಿ ಶ್ರೀದೇವಿ ಪುರಾಣ ಪಠಣ

ಲೋಕ ಕಲ್ಯಾಣಕ್ಕಾಗಿ ನಗರದ ಶ್ರೀ ಹಾಸನಾಂಬ ದೇವಾಲಯದಲ್ಲಿ ಸಾಮೂಹಿಕ 108ಕ್ಕೂ ಹೆಚ್ಚು ಜನರು ಶ್ರೀ ದೇವಿ ಪುರಾಣ ಪಠಣ, ಹೋಮ ನಡೆಸಿದರು.
ಲೋಕ ಕಲ್ಯಾಣಕ್ಕಾಗಿ ನಗರದ ಶ್ರೀ ಹಾಸನಾಂಬ ದೇವಾಲಯದಲ್ಲಿ ಸಾಮೂಹಿಕ 108ಕ್ಕೂ ಹೆಚ್ಚು ಜನರು ಶ್ರೀ ದೇವಿ ಪುರಾಣ ಪಠಣ, ಹೋಮ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹಾಸನಾಂಬ ದೇವಾಲಯದಲ್ಲಿ ಶ್ರೀದೇವಿ ಪುರಾಣ ಪಠಣ
  • ಹಲವು ಮಠಾಧೀಶರು ಭಾಗಿ
ಹಾಸನ: ಲೋಕ ಕಲ್ಯಾಣ, ಮಳೆ-ಬೆಳೆ, ಜನಸಾಮಾನ್ಯರ ಸುಖ-ಶಾಂತಿ ಹಾಗೂ ನೆಮ್ಮದಿಗಾಗಿ ಶುಕ್ರವಾರ ನಗರದ ಶ್ರೀ ಹಾಸನಾಂಬ ದೇವಾಲಯದಲ್ಲಿ ಸಾಮೂಹಿಕ 108ಕ್ಕೂ ಹೆಚ್ಚು ಜನರು ಶ್ರೀದೇವಿ ಪುರಾಣ ಪಠಣ, ಹೋಮ ನಡೆಸಿದರು.
ಇದೇ ವೇಳೆ ನಡೆದ ಧರ್ಮಸಭೆಯಲ್ಲಿ ಹಲವು ಮಠಾಧೀಶರು ಭಾಗಿಯಾಗಿ ಹಾಸನಾಂಬೆ ಮಹತ್ವವನ್ನು ಮನನ ಮಾಡಿದರು. ರಾಯಚೂರಿನ ಉಮಳಿ ಹೊಸೂರು ಹಿರೇಮಠದ ಕಿಡಿಗಣ್ಣಯ್ಯ ಸ್ವಾಮೀಜಿ ಸೇರಿ ಹಲವು ಮಠಾಧೀಶರು ಭಾಗಿಯಾಗಿದ್ದರು. ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ತಾಲೂಕು ಘಟಕ ಸೇರಿದಂತೆ ಇತರರು ಸಹಕಾರ ನೀಡಿದರು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ 108ಕ್ಕೂ ಹೆಚ್ಚು ಶ್ರೀದೇವಿ ಉಪಾಸಕರು ಸಾಮೂಹಿಕವಾಗಿ ಶ್ರೀ ದೇವಿ ಪುರಾಣ ಪಠಣ ಹಾಗೂ ಹೋಮದಲ್ಲಿ ಪಾಲ್ಗೊಂಡಿದ್ದರು.
ಪ್ರಕೃತಿ ಸಮ್ಮಿಲನ, ಉತ್ತಮ ಮಳೆ, ಸಮೃದ್ಧ ಬೆಳೆ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಯೂರಲಿ ಎಂದು ಎಲ್ಲರೂ ಸೇರಿ ಪ್ರಾರ್ಥಿಸಿದರು. ಧಾರ್ಮಿಕ ಮಂತ್ರೋಚ್ಚಾರಣೆಯೊಂದಿಗೆ ದೇವಾಲಯದ ವಾತಾವರಣ ಸಂಪೂರ್ಣವಾಗಿ ಆಧ್ಯಾತ್ಮಿಕತೆ ಯಿಂದ ತುಂಬಿ ತುಳುಕಿತ್ತು. ವಿವಿಧ ಮಠಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಉತ್ಸವದ ಘನತೆ ಹೆಚ್ಚಿಸಿದರು.
ಸಮಾಜಸೇವಕ ಕಂಚಮಾರನಹಳ್ಳಿ ಕಾಂತಣ್ಣ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ, ಬಿಜೆಪಿ ಮುಖಂಡ ಪುನೀತ್‌ಗೌಡ, ಜಿಲ್ಲಾ ಚುಸಾಪ ಅಧ್ಯಕ್ಷ ಬಾ.ನಂ ಲೋಕೇಶ್ ಮೊದಲಾದವರು ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net