ಅರಕಲಗೂಡು ತಾಲೂಕಿನ ರಾಮನಾಥಪುರದ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ಬುಧವಾರ ರಾತ್ರಿ ನಡೆದ ಶ್ರೀರಾಮ ನವಮಿ ಸಂಗೀತೋತ್ಸವದಲ್ಲಿ ಬೆಂಗಳೂರಿನ ನೃತ್ಯಾನ್ವೇಷಣೆಯ ವಿದುಷಿ ಎನ್.ಎಸ್ ಸುಪ್ರಜಾ ಹಾಗೂ ತಂಡದವರು ಭರತನ್ಯಾಟ ನಡೆಸಿಕೊಟ್ಟರು.
ಅರಕಲಗೂಡು: ಭರತನಾಟ್ಯ ಕಲೆಯನ್ನು ಎಲ್ಲರೂ ಬೆಂಬಲಿಸಿ ಪ್ರೋತ್ಸಾಹಿಸಿ ಎಂದು ರಾಮನಾಥಪುರದ ಶ್ರೀ ಪಟ್ಟಾಭಿರಾಮ ದೇವಸ್ಥಾನ ಮಾಜಿ ಸಂಘಟಕ ಆರ್.ಎಸ್.ನರಸಿಂಹಮೂರ್ತಿ ತಿಳಿಸಿದರು.
ತಾಲೂಕಿನ ರಾಮನಾಥಪುರದ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ಬುಧವಾರ ರಾತ್ರಿ 6ನೇ ದಿನದ ಶ್ರೀರಾಮ ನವಮಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭರತನಾಟ್ಯ ಎಲ್ಲ ವರ್ಗದ ಮಕ್ಕಳಿಂದ ಮೂಲೆ ಮೂಲೆಗಳಲ್ಲಿ ಹೆಸರು ಪಡೆಯುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಇದೆ. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಬೆಳೆಯಬೇಕು. ಇದಕ್ಕೆ ಸ್ಥಳೀಯರ ಸಹಕಾರ ಬಹು ಮುಖ್ಯ ಎಂದರು.
ಬೆಂಗಳೂರು ನೃತ್ಯಾನ್ವೇಷಣೆಯ ವಿದುಷಿ ಎನ್.ಎಸ್ ಸುಪ್ರಜಾ ಹಾಗೂ ತಂಡ ಭರತನ್ಯಾಟ ನಡೆಸಿಕೊಟ್ಟರು. ಜಿಪಂ ಮಾಜಿ ಸದಸ್ಯೆ ತಾರಾ ಮಂಜು, ಶಾಸಕರಾದ ಎ.ಮಂಜು, ಡಾ.ಮಂತರ್‌ಗೌಡ ಪೂಜಾ ಹಾಗೂ ಪ್ರಸಾದ ವ್ಯವಸ್ಥೆ ಮಾಡಿದ್ದರು. ದೇವಾಸ್ಥಾನ ಮುಖ್ಯ ಅರ್ಚಕ ಶ್ರೀನಿವಾಸ ಭಟ್ಟರು ಇದ್ದರು.