ಸೆಸ್ಕ್ ನೌಕರರಿಂದ ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ (ಸೆಸ್ಕ್) ಬೇಲೂರು ಉಪ ವಿಭಾಗದ ನೌಕರರು ಬುಧವಾರ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಸವರಾಜು ಇತರರು ಇದ್ದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ (ಸೆಸ್ಕ್) ಬೇಲೂರು ಉಪ ವಿಭಾಗದ ನೌಕರರು ಬುಧವಾರ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಸವರಾಜು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • CESC employees
ಬೇಲೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ (ಸೆಸ್ಕ್) ಬೇಲೂರು ಉಪ ವಿಭಾಗದ ನೌಕರರು ಬುಧವಾರ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆ ನೆರವೇರಿಸಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಇಲಾಖೆಯಿಂದ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಸೆಸ್ಕ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಬೇಲೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಸವರಾಜು ಮಾತನಾಡಿ, ಪ್ರತಿ ವರ್ಷ ಇಲಾಖೆಯ ಎಲ್ಲ ಸಿಬ್ಬಂದಿ ಪರವಾಗಿ ಶ್ರೀ ಚನ್ನಕೇಶವಸ್ವಾಮಿ ದೇವರಿಗೆ ಅಭಿಷೇಕ ಮಾಡಿಸುವುದು ನಮ್ಮ ಇಲಾಖೆಯಿಂದ ನಡೆದುಕೊಂಡು ಬಂದಿದೆ. ವಿದ್ಯುತ್ ಅವಘಡಗಳು ಕಡಿಮೆಯಾಗಲಿ, ಜನರ ಜೀವ-ಸಂಪತ್ತು ರಕ್ಷಿತವಾಗಿರಲಿ ಹಾಗೂ ನಮ್ಮ ಇಲಾಖೆಯ ಎಲ್ಲ ಕೆಲಸಗಳು ಸುಗಮವಾಗಿ ಸಾಗಲಿ ಎಂಬ ಉದ್ದೇಶದಿಂದ ದೇವರಿಗೆ ಪೂಜೆ ನಡೆಸಲಾಗುತ್ತಿದೆ. ಮಳೆಯೂ ಸಮರ್ಪಕವಾಗಿ ಬಂದು ತಾಲೂಕಿನ ಅಭಿವೃದ್ಧಿಗೆ ದಾರಿ ಮಾಡಿಕೊಡಲಿ ಎಂಬ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್ ಮಾತನಾಡಿ, ಬೇಲೂರು ಉಪ ವಿಭಾಗದಿಂದ ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಶಿಸ್ತಿನಿಂದ ಮಾಡಲಾಗಿದೆ. ಜನತೆಗೆ ನಿರಂತರ ಮತ್ತು ಸುರಕ್ಷಿತ ವಿದ್ಯುತ್ ಸರಬರಾಜು ನೀಡುವುದು ನಮ್ಮ ಪ್ರಮುಖ ಹೊಣೆಗಾರಿಕೆ. ದೇವರ ಕೃಪೆಯಿಂದ ನಮ್ಮ ಸಿಬ್ಬಂದಿ ಆರೋಗ್ಯದಿಂದ ಸೇವೆ ಸಲ್ಲಿಸಲಿ, ಯಾವುದೇ ಅನಾಹುತಗಳು ಸಂಭವಿಸದಂತೆ ಇಲಾಖೆ ಕಾರ್ಯನಿರ್ವಹಿಸಲಿ ಎಂಬ ಆಶಯದೊಂದಿಗೆ ಪೂಜೆ ನೆರವೇರಿಸಲಾಗಿದೆ ಎಂದರು.
ಉಪ ವಿಭಾಗದ ತಾಲೂಕು ಅಧ್ಯಕ್ಷ ಜಗದೀಶ್, ಕೇಂದ್ರ ಸಮಿತಿ ಸದಸ್ಯ ನವಾಜ್ ಖಾನ್, ಕಿರಿಯ ಇಂಜಿನಿಯರ್ ರೇವಣ್ಣ, ಸಿಬ್ಬಂದಿ ರಾಘವೇಂದ್ರ, ಪುಟ್ಟರಾಜು, ಮಂಜುನಾಥ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಇದ್ದರು. ಪೂಜೆಯ ನಂತರ ಪ್ರಸಾದ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net