ಅಯ್ಯಪ್ಪಸ್ವಾಮಿಗೆ ವಿಶೇಷ ಜ್ಯೋತಿ ಪೂಜೆ

ಶ್ರೀ ಚನ್ನಕೆಶವಸ್ವಾಮಿ ದೇಗುಲ ಸಮೀಪದ ಕೋಟೆ ಬಯಲು ರಂಗ ಮಂದಿರದಲ್ಲಿ ಪ್ರತಿಷ್ಠಾಪಿಸಿರುವ ಅಯ್ಯಪ್ಪಸ್ವಾಮಿಗೆ ಮಕರ ಸಂಕ್ರಾಂತಿಯಂದು ಪೂಜೆ ಸಲ್ಲಿಸಿದ ಭಕ್ತರು.
ಶ್ರೀ ಚನ್ನಕೆಶವಸ್ವಾಮಿ ದೇಗುಲ ಸಮೀಪದ ಕೋಟೆ ಬಯಲು ರಂಗ ಮಂದಿರದಲ್ಲಿ ಪ್ರತಿಷ್ಠಾಪಿಸಿರುವ ಅಯ್ಯಪ್ಪಸ್ವಾಮಿಗೆ ಮಕರ ಸಂಕ್ರಾಂತಿಯಂದು ಪೂಜೆ ಸಲ್ಲಿಸಿದ ಭಕ್ತರು.
Published on

ಪ್ರಮುಖ ಮುಖ್ಯಾಂಶಗಳು

  • ಕೋಟೆ ಬಯಲು ರಂಗ ಮಂದಿರದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಅಯ್ಯಪ್ಪಸ್ವಾಮಿ ಮೂರ್ತಿ
ಬೇಲೂರು: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಸಮೀಪದ ಕೋಟೆ ಬಯಲು ರಂಗ ಮಂದಿರದಲ್ಲಿ ಪ್ರತಿಷ್ಠಾಪಿಸಿರುವ ಅಯ್ಯಪ್ಪಸ್ವಾಮಿಗೆ ಮಕರ ಸಂಕ್ರಾಂತಿ ಅಂಗವಾಗಿ ಬುಧವಾರ ವಿಶೇಷ ಜ್ಯೋತಿ ಪೂಜೆ ನೆರವೇರಿಸಲಾಯಿತು.
ಕೆಲ ದಿನಗಳ ಹಿಂದೆ ಕೋಟೆ ಬಯಲು ರಂಗ ಮಂದಿರದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಅಯ್ಯಪ್ಪಸ್ವಾಮಿ ಮೂರ್ತಿಗೆ ಶುದ್ಧಿ ಪೂಜೆ ನೆರವೇರಿಸಿದ ನಂತರ ನೂರಾರು ಭಕ್ತರ ಸಮ್ಮುಖದಲ್ಲಿ ದೇವರ ಮೂರ್ತಿಗೆ ಪುಷ್ಪಗಳ ಅಲಂಕಾರ ಮತ್ತು ದೀಪದ ಅಲಂಕಾರ ಸೇರಿದಂತೆ ವಿಶೇಷ ಪೂಜೆ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಬರಿಮಲೆಯಲ್ಲಿ ನಡೆಯುವ ಅಯ್ಯಪ್ಪ ಸ್ವಾಮಿಯ ಮಕರ ಜ್ಯೋತಿ ಸಮಯಕ್ಕೆ ಸರಿಯಾಗಿ ಇಲ್ಲಿನ ಮಂಟಪದಲ್ಲಿಯೂ ಸಹ ದೇವರಿಗೆ ಜ್ಯೋತಿ ಬೆಳಗಿಸಿ ಸಂಭ್ರಮಿಸಲಾಯಿತು.
ಗುರುಸ್ವಾಮಿ ಪ್ರಕಾಶ್ ಮಾತನಾಡಿ, ಪ್ರತಿ ವರ್ಷವೂ ಮಕರ ಜ್ಯೋತಿಯಂದು ಕೋಟೆ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಏರ್ಪಡಿಸುವುದರ ಮೂಲಕ ಎಲ್ಲರಿಗೂ ಸುಖ, ಶಾಂತಿ ನೆಮ್ಮದಿ ನೀಡುವಂತೆ ಜ್ಯೋತಿ ಸ್ವರೂಪ ಅಯ್ಯಪ್ಪನನ್ನು ಭಕ್ತಿಯಿಂದ ಪ್ರಾರ್ಥಿಸಲಾಯಿತು ಎಂದರು.
ಸುರೇಶ್, ಮನು, ನಂದನ್, ರಾಘವೇಂದ್ರ ಹೊಳ್ಳ, ಕೇಶವಮೂರ್ತಿ, ಹರೀಶ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net