ಅರಸು ಹಾದಿಯಲ್ಲೇ ಸಾಗುತ್ತಿರುವ ಸಿದ್ದರಾಮಯ್ಯ

 ನಗರದ ಬಸವೇಶ್ವರ ವೃತ್ತದಲ್ಲಿ  ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದರು. ಬಿಳಿಚೌಡಯ್ಯ, ಚಂದ್ರಶೇಖರ್, ಧರ್ಮಶೇಖರ್ ಇತರರು ಇದ್ದರು.
ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದರು. ಬಿಳಿಚೌಡಯ್ಯ, ಚಂದ್ರಶೇಖರ್, ಧರ್ಮಶೇಖರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿಕೆ
  • ಅಭಿನಂದನಾ ಕಾರ್ಯಕ್ರಮ
ಅರಸೀಕೆರೆ: ದೇಶಕಂಡ ಪ್ರಬುದ್ಧ ರಾಜಕಾರಣಿಗಳಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹಾಗೂ ಸಿಎಂ ಸಿದ್ದರಾಮಯ್ಯ ಅಗ್ರಪಂಕ್ತಿಗೆ ಸೇರುತ್ತಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಹಿಂದಿಕ್ಕಿದ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡವರು, ಶೋಷಿತರು, ಶ್ರಮಿಕರ ಹಿತ ಮನಗಂಡು ಹಸಿದವರಿಗೆ ಅನ್ನ, ಸೂರು, ಶಿಕ್ಷಣ ಅರಿವು, ಆಶ್ರಯ ಸೇರಿದಂತೆ ಜನಸಮಾನ್ಯರು ಊಹಿಸಲು ಸಾಧ್ಯವಿಲ್ಲದ ಕೆಲಸಗಳನ್ನು ದೇವರಾಜ ಅರಸು ಮಾಡಿದ್ದಾರೆ. ಆದ್ದರಿಂದ ಇಂದಿಗೂ ಅವರನ್ನು ಸ್ಮರಿಸುವ,ಅನುಕರಣೆ ಮಾಡುವ ಪರಿಪಾಠ ಮುಂದುವರಿದಿದೆ. ಇದೀಗ ಸಿಎಂ ಸಿದ್ದರಾಮಯ್ಯ ಕೂಡ ಅರಸು ಹಾಕಿದ ಮಾರ್ಗದಲ್ಲಿ ಸಾಗುತ್ತಿರುವುದು ಶ್ಲಾಘನೀಯ. ವ್ಯಾಸಂಗದ ಅವಧಿಯಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಶಿಕ್ಷಣ ಪಡೆದ ಸನ್ನಿವೇಶ ವಿವರಿಸಿದರು.
ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹಾಗೂ ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ದಿದ್ದಾರೆ. ಸಮಾಜಕ್ಕೆ ಉಭಯ ನಾಯಕರು ಎರಡು ಕಣ್ಣುಗಳಿದ್ದಂತೆ ಎಂಬುದನ್ನು ಮರೆಯಬಾರದು. ಭೂ ಸುಧಾರಣಾ ಕಾಯ್ದೆ ಅನುಷ್ಠಾನದ ಮೂಲಕ ಬಡವರಿಗೆ ನೆರವಾಗಿದ್ದು ಅರಸು ಇಂದಿಗೂ ಮನೆ ಮಾತಾಗಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿರುವ ಸಿದ್ದರಾಮಯ್ಯ ಎಲ್ಲ ಸಮುದಾಯದ ಆಶಾಕಿರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಜಿಪಂ ಮಾಜಿ ಸದಸ್ಯ ಬಿಳಿಚೌಡಯ್ಯ, ಹರತನಹಳ್ಳಿ ಜಯಣ್ಣ, ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಗಂಜಿಗೆರೆ ಚಂದ್ರಶೇಖರ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಬಾಲಮುರುಗನ್, ಜಿಪಂ ಮಾಜಿ ಸದಸ್ಯೆ ಸುಲೋಚನಾ ಬಾಯಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net