ವಿದ್ಯಾವಂತರಿದ್ದರೂ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಳ

ಹಾಸನ ನಗರದ ಎಂ.ಕೃಷ್ಣ ಕಾನೂನು ಕಾಲೇಜಿಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಭಾರತಿ ರಾಜಶೇಖರ್, ಡಾ.ವಿ.ಶ್ರೀನಿವಾಸ್, ಕೆ.ಎಸ್.ರೇಖಾ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ಹಾಸನ ನಗರದ ಎಂ.ಕೃಷ್ಣ ಕಾನೂನು ಕಾಲೇಜಿಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಭಾರತಿ ರಾಜಶೇಖರ್, ಡಾ.ವಿ.ಶ್ರೀನಿವಾಸ್, ಕೆ.ಎಸ್.ರೇಖಾ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾವಂತರಿದ್ದರೂ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಳ
  • ಸ್ತ್ರೀ ರೋಗ ತಜ್ಞೆ ಡಾ.ಭಾರತಿ ರಾಜಶೇಖರ್ ಕಳವಳ
  • ಮಹಿಳಾ ದಿನಾಚರಣೆ ಕಾರ್ಯಕ್ರಮ
ಹಾಸನ: ಮನುಷ್ಯರಾಗಿ ಹುಟ್ಟಿದ ನಾವು ಸಮಾಜಕ್ಕೆ ಯಾವುದಾದರೂ ಒಂದು ರೀತಿಯಲ್ಲಿ ಅನುಕೂಲವಾಗುವ ಕೊಡುಗೆಗಳನ್ನು ನೀಡಬೇಕು ಎಂದು ಸ್ತ್ರೀ ರೋಗ ತಜ್ಞೆ ಡಾ.ಭಾರತಿ ರಾಜಶೇಖರ್ ಅಭಿಪ್ರಾಯಪಟ್ಟರು.
ನಗರದ ಎಂಜಿ ರಸ್ತೆಯಲ್ಲಿರುವ ಎಂ.ಕೃಷ್ಣ ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯೂ ಒಳ್ಳೆ ತತ್ವ, ಆಚರಣೆಗಳನ್ನು ಹೊಂದಿದೆ ಎಂಬುದು ನಮಗೆಲ್ಲ ಹೆಮ್ಮೆಯ ವಿಚಾರ. ಆದರೆ, ಇತ್ತೀಚೆಗೆ ಅದು ಸೊರಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ನಮ್ಮಲ್ಲಿ ಸಾಕಷ್ಟು ಜನ ವಿದ್ಯಾವಂತರಿದ್ದರೂ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ಭಯಪಡುವಂತಾಗಿದೆ. ಸಮಾನತೆ ಎಂದರೆ ನಾನು ಹೆಚ್ಚು, ನೀನು ಕಡಿಮೆ ಎನ್ನುವುದಲ್ಲ, ಗಂಡು ಹೆಣ್ಣು ಒಟ್ಟಾಗಿ ಹೋಗುವುದಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟಿ ಕಾರುಣ್ಯ ರಾಮ್ ಮಾತನಾಡಿ, ಮಾರ್ಚ್ 8ರಂದು ಮಾತ್ರ ಮಹಿಳಾ ದಿನಾಚರಣೆ ಮಾಡುವುದಲ್ಲ. ಪ್ರತಿದಿನ ಅದನ್ನು ನೆನಪಿಸಿಕೊಳ್ಳಬೇಕು. ಸಮಾಜದಲ್ಲಿ ಪೊಲೀಸರು, ವಕೀಲರು, ವೈದ್ಯರು ಎಲ್ಲರಿಗೂ ನೆರವಾಗುವಂತಹ ಕೆಲಸ ಮಾಡುತ್ತಾರೆ. ಅದೇ ರೀತಿ ಈ ಕಾಲೇಜಿನ ವಿದ್ಯಾರ್ಥಿಗಳು ಕೂಡ ಸಮಾಜಕ್ಕೆ ಅನುಕೂಲವಾಗುವಂತೆ ಬದುಕಿ ಎಂದರು.
ಪ್ರಾಂಶುಪಾಲ ಡಾ.ವಿ.ಶ್ರೀನಿವಾಸ್, ಸಹಾಯಕ ಪ್ರಾಧ್ಯಾಪಕಿ ಕೆ.ಎಸ್.ರೇಖಾ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net