ಮುಸಿಕಿನ ಜೋಳ ಬಿತ್ತನೆ ಬೀಜ ಜಪ್ತಿ

ಸಾಲಗಾಮೆ ಹೋಬಳಿಯ ಕೊಂಡಜ್ಜಿ ಕೊಪ್ಪಲು ಗ್ರಾಮದಲ್ಲಿನ ಕಾರ್ತಿಕ್ ಟ್ರೇಡರ್ಸ್‌ ಹೆಸರಿನ ಬಿತ್ತನೆ ಬೀಜ ಮಾರಾಟಗಾರರಿಂದ  ಮುಸಿಕಿನ ಜೋಳ ಬಿತ್ತನೆ ಬೀಜವನ್ನು ಡಿ.ಕೆ.ಯೋಗಾನಂದ ಜಪ್ತಿ ಮಾಡಿರುವುದು.
ಸಾಲಗಾಮೆ ಹೋಬಳಿಯ ಕೊಂಡಜ್ಜಿ ಕೊಪ್ಪಲು ಗ್ರಾಮದಲ್ಲಿನ ಕಾರ್ತಿಕ್ ಟ್ರೇಡರ್ಸ್‌ ಹೆಸರಿನ ಬಿತ್ತನೆ ಬೀಜ ಮಾರಾಟಗಾರರಿಂದ ಮುಸಿಕಿನ ಜೋಳ ಬಿತ್ತನೆ ಬೀಜವನ್ನು ಡಿ.ಕೆ.ಯೋಗಾನಂದ ಜಪ್ತಿ ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮುಸಿಕಿನ ಜೋಳ ಬಿತ್ತನೆ ಬೀಜ ಜಪ್ತಿ
  • ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದ (ಜಾರಿ ದಳ) ತಂಡ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ
ಹಾಸನ: ಸಾಲಗಾಮೆ ಹೋಬಳಿಯ ಕೊಂಡಜ್ಜಿ ಕೊಪ್ಪಲು ಗ್ರಾಮದಲ್ಲಿನ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಮಾರಾಟ ಮಳಿಗೆಗೆ ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದ (ಜಾರಿ ದಳ) ತಂಡ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಜಿಲ್ಲಾಡಳಿತದ ಆದೇಶದ ಮೇರೆಗೆ ಕೃಷಿ ಇಲಾಖೆಯ ಜಾಗೃತ ಕೋಶದ ಸಹಾಯಕ ಕೃಷಿ ನಿರ್ದೇಶಕರು ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಮಾರಾಟ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿತ್ತನೆ ಬೀಜ ಮಾರಾಟದಲ್ಲಿ ಪರವಾನಗಿ ಪಡೆಯದಿರುವ ಹಾಗೂ ರೋಗ, ಶಿಲೀಂದ್ರದ ಬಗ್ಗೆ ಪರೀಕ್ಷೆಗೊಳಪಡಿಸದ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಮಾರಾಟಕ್ಕೆ ದಾಸ್ತಾನು ಮಾಡಿದ್ದು ಕಂಡುಬಂದಿದೆ.
ಕೊಂಡಜ್ಜಿ ಕೊಪ್ಪಲು ಗ್ರಾಮದಲ್ಲಿನ ಕಾರ್ತಿಕ್ ಟ್ರೇಡರ್ಸ್‌ ಹೆಸರಿನ ಬಿತ್ತನೆ ಬೀಜ ಮಾರಾಟಗಾರರಿಂದ 180 ಕೆಜಿ ತೂಕದ ಸುಮಾರು 85 ಸಾವಿರ ರೂ ಮೌಲ್ಯದ ಮುಸುಕಿನ ಜೋಳ ಬಿತ್ತನೆ ಬೀಜವನ್ನು ಜಾರಿ ದಳ-2 ಸಹಾಯಕ ಕೃಷಿ ನಿರ್ದೇಶಕ ಡಿ.ಕೆ.ಯೋಗಾನಂದ ಜಪ್ತಿ ಮಾಡಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net