ಬಿತ್ತನೆ ಆಲೂಗಡ್ಡೆ ಖರೀದಿಸುವಾಗ ಬಿಲ್ಲಿನಲ್ಲಿ ಗುಣಮಟ್ಟ, ಉತ್ಪಾದನಾ ಸ್ಥಳ, ತಳಿ, ಟ್ರೇಡ್‌ಮಾರ್ಕ್ ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಖರೀದಿಸಿದ ಗಡ್ಡೆಗಳನ್ನು 10-15 ದಿನ ನೆರಳಿನಲ್ಲಿ ಹರಡಿ ಹದಗೊಳಿಸಿ ಬಿತ್ತನೆಗೆ 24 ಗಂಟೆ ಮುಂಚಿತವಾಗಿ ಬೀಜೋಪಚಾರ ಮಾಡಬೇಕು. ಬಿತ್ತನೆಗೆ 10-15 ದಿನ ಮುಂಚಿತವಾಗಿ ಭೂಮಿ ಸಿದ್ಧಪಡಿಸಿ, ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರ ಸೇರಿಸಿ, ಮಳೆ ಬಿದ್ದು ಭೂಮಿಯ ತಾಪಮಾನ ಕಡಿಮೆಯಾದ ನಂತರ ಬಿತ್ತನೆ ಮಾಡಬೇಕು. ಹೆಚ್ಚಿನ ಮಾಹಿತಿಗೆ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಹೋಬಳಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಯೋಗೇಶ್ ತಿಳಿಸಿದ್ದಾರೆ.