ಗಿಡ ನೆಟ್ಟು ಸಾಲುಮರದ ತಿಮ್ಮಕ್ಕನ ಜನ್ಮದಿನ ಆಚರಣೆ

ವೃಕ್ಷಮಾತೆ ದಿ.ಡಾ.ಸಾಲುಮರದ ತಿಮ್ಮಕ್ಕ ಅವರ 115ನೇ ಜನ್ಮದಿನದ ಅಂಗವಾಗಿ ಸಕಲೇಶಪುರದ ಹೊಸ ಬಸ್ ನಿಲ್ದಾಣದ ಎದುರು ಗಿಡಗಳನ್ನು ನೆಡಲಾಯಿತು. ಜಿ.ಎಸ್.ಇತಿಹಾಸ್, ವಿಜಯ್‌ಕುಮಾರಿ, ಚಂದ್ರಶೇಖರ್ ಮತ್ತಿತರರಿದ್ದರು.
ವೃಕ್ಷಮಾತೆ ದಿ.ಡಾ.ಸಾಲುಮರದ ತಿಮ್ಮಕ್ಕ ಅವರ 115ನೇ ಜನ್ಮದಿನದ ಅಂಗವಾಗಿ ಸಕಲೇಶಪುರದ ಹೊಸ ಬಸ್ ನಿಲ್ದಾಣದ ಎದುರು ಗಿಡಗಳನ್ನು ನೆಡಲಾಯಿತು. ಜಿ.ಎಸ್.ಇತಿಹಾಸ್, ವಿಜಯ್‌ಕುಮಾರಿ, ಚಂದ್ರಶೇಖರ್ ಮತ್ತಿತರರಿದ್ದರು.
Published on
ಸಕಲೇಶಪುರ: ವೃಕ್ಷಮಾತೆ ದಿ.ಡಾ.ಸಾಲುಮರದ ತಿಮ್ಮಕ್ಕ ಅವರ 115ನೇ ಜನ್ಮದಿನದ ಅಂಗವಾಗಿ ಸಕಲೇಶಪುರದ ಹೊಸ ಬಸ್ ನಿಲ್ದಾಣದ ಎದುರು ಗಿಡಗಳನ್ನು ನೆಟ್ಟು ನಮನ ಸಲ್ಲಿಸಲಾಯಿತು.
ಹಸಿರು ಕರ್ನಾಟಕ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು.
ಪರಿಸರ ಪ್ರೇಮಿ ಜಿ.ಎಸ್.ಇತಿಹಾಸ್ ಮಾತನಾಡಿ, ಸಾಲುಮರದ ತಿಮ್ಮಕ್ಕ ಅವರ ಪರಿಸರ ಪ್ರೇಮ ಮತ್ತು ಸೇವಾ ಮನೋಭಾವ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅವರ ಜನ್ಮದಿನದಂದು ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಅದರ ಪೋಷಣೆಯ ಹೊಣೆ ಹೊತ್ತರೆ ಅದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಭಿಪ್ರಾಯಪಟ್ಟರು.
ಹಸಿರೇ ಉಸಿರು, ಪ್ರತಿಯೊಬ್ಬರೂ ಒಂದು ಗಿಡ ನೆಟ್ಟು ಪ್ರಕೃತಿಯನ್ನು ಉಳಿಸೋಣ ಎಂಬ ಸಂದೇಶದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಾರಿಗೆ ಸಂಚಾರ ನಿಯಂತ್ರಣಾಧಿಕಾರಿ ವಿಜಯ್‌ಕುಮಾರಿ, ಸಿದ್ದಲಿಂಗೇಶ್ವರ ಬೇಕರಿಯ ಚಂದ್ರಶೇಖರ್, ಆಟೋ ಚಾಲಕರು ಹಾಗೂ ಬಸ್ ನಿಲ್ದಾಣದ ಸಿಬ್ಬಂದಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net