ಮೃತ ರೈತನ ಕುಟಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಲಿ

ಹೆಜ್ಜೇನು ದಾಳಿಯಿಂದ ಮೃತಪಟ್ಟ ತಾಲೂಕಿನ ಕಸಬಾ ಹೋಬಳಿ ಕಣತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಗರನಹಳ್ಳಿ ಗ್ರಾಮದ ರೈತ ರುದ್ರಶೆಟ್ಟಿಯ ಮನೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಹೆಜ್ಜೇನು ದಾಳಿಯಿಂದ ಮೃತಪಟ್ಟ ತಾಲೂಕಿನ ಕಸಬಾ ಹೋಬಳಿ ಕಣತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಗರನಹಳ್ಳಿ ಗ್ರಾಮದ ರೈತ ರುದ್ರಶೆಟ್ಟಿಯ ಮನೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
Published on
ಆಲೂರು: ಇತ್ತೀಚೆಗೆ ಹೆಜ್ಜೇನು ದಾಳಿಯಿಂದ ಮೃತಪಟ್ಟ ರೈತ ರುದ್ರಶೆಟ್ಟಿ ಅವರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಬೇಕೆಂದು ಶಾಸಕ ಸಿಮೆಂಟ್ ಮಂಜು ಸರಕಾರವನ್ನು ಒತ್ತಾಯಿಸಿದರು.

ತಾಲೂಕಿನ ಕಸಬಾ ಹೋಬಳಿ ಕಣತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಗರನಹಳ್ಳಿ ಗ್ರಾಮದಲ್ಲಿ ಹೆಜ್ಜೇನು ದಾಳಿಯಿಂದ ಮೃತರಾದ ರೈತ ರುದ್ರಶೆಟ್ಟಿ ಅವರ ಮನೆಗೆ ಇತ್ತೀಚೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಮಾತನಾಡಿದರು.

ಸರ್ಕಾರ ಕಾಡಾನೆಗಳ ದಾಳಿಯಿಂದ ಮೃತ ಪಟ್ಟ ರೈತ ಕುಟುಂಬಗಳಿಗೆ ನೀಡುವ 20 ಲಕ್ಷ ರೂ. ಪರಿಹಾರ ಧನದಂತೆ ಈ ಜೇನುಹುಳ ದಾಳಿಗೆ ತುತ್ತಾಗುವ ರೈತ ಕುಟುಂಬಗಳಿಗೂ ನೀಡಬೇಕಿದೆ. ಏಕೆಂದರೆ ಮೃತ ಪಡುವ ರೈತರು ಸಹ ಸಣ್ಣ ರೈತ ಕುಟುಂಬಕ್ಕೆ ಸೇರಿದವರಾಗಿರುತ್ತಾರೆ . ಆದ್ದರಿಂದ ಈ ಕುಟುಂಬದ ಜೀವನೋಪಾಯಕ್ಕೆ ಸರ್ಕಾರ ತಕ್ಷ ಣ 20 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಡಿ. 8 ರಿಂದ ಪ್ರಾರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಈ ಸಂಬಂಧ ವಿಷಯ ಪ್ರಸ್ತಾಪ ಮಾಡಲಾಗುವುದು ಎಂದ ಅವರು ಹೆಜ್ಜೇನಿಂದ ಕಳಿಸಿಕೊಂಡಿರುವ ಅದೇ ಗ್ರಾಮದ ಮತ್ತೊಬ್ಬ ರೈತ ದರ್ಶನ್ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ಸ್ಥಿತಿ ವಿಚಾರಿಸಿದರು.

ಈ ಸಂದರ್ಭದಲ್ಲಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಮೋಹನ್ ಕುಮಾರ್, ಬಿಜೆಪಿ ಮುಖಂಡರಾದ ಮೋಹನ್, ಹೆಮಂತ್, ಸ್ನೇಹಜೀವಿ ಗಣೇಶ್, ಹಿರಿಯ ಕಾಂಗ್ರೆಸ್ ಮುಖಂಡ ಶಾಂತಕೃಷ್ಣ, ಗ್ರಾಮಸ್ಥ ಚಂದ್ರಶೆಟ್ಟಿ, ಕೃಷಿ ಅಧಿಕಾರಿ ರಮೇಶ್ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net