ಬಸವನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ

 ಅರಕಲಗೂಡು ತಾಲೂಕು ಬಸವನಹಳ್ಳಿ ಗ್ರಾಮದಲ್ಲಿ 2 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಮಂಜು ಶನಿವಾರ ಭೂಮಿಪೂಜೆ ನೆರವೇರಿಸಿದರು. ಎಸ್.ಮಂಜಯ್ಯ, ದಕ್ಷಿಣಾಮೂರ್ತಿ, ಆನಂದ, ಜ್ಯೋತಿ ಮಹೇಶ್, ಲತಾ ಬೇಬಿಕುಮಾರ, ಮಹದೇವಮ್ಮ ರಾಮಚಂದ್ರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಭೂಮಿಪೂಜೆ ನೆರವೇರಿಸಿದ ಶಾಸಕ ಎ.ಮಂಜು
ಅರಕಲಗೂಡು: ತಾಲೂಕಿನ ರಾಮನಾಥಪುರ ಹೋಬಳಿ ಬಸವನಹಳ್ಳಿ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಮಂಜು ಶನಿವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು, ಗ್ರಾಮಸ್ಥರು ಕೂಡ ಕಳಪೆ ಕಾಮಗಾರಿ ಆಗದಂತೆ ನಿಗಾ ವಹಿಸಬೇಕು. ಉಳಿಕೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸುವುದು ಎಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷ ಎಸ್.ಮಂಜಯ್ಯ, ಉಪಾಧ್ಯಕ್ಷೆ ರಜಿನಿ ಸತೀಶ್, ಸದಸ್ಯರಾದ ದಕ್ಷಿಣಾಮೂರ್ತಿ, ಆನಂದ, ಜ್ಯೋತಿ ಮಹೇಶ್, ಲತಾ ಬೇಬಿಕುಮಾರ, ಮಹದೇವಮ್ಮ ರಾಮಚಂದ್ರ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿಂದುಮಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net