ಗ್ರಾಮಸ್ಥರ ಬೇಡಿಕೆಯಂತೆ ರಸ್ತೆ ಅಭಿವೃದ್ಧಿಗೆ ಚಾಲನೆ

ಬೇಲೂರು ತಾಲೂಕಿನ ಗಂಗೂರು-ಕನಕೆಮಹಳ್ಳಿ ಗ್ರಾಮದಲ್ಲಿ ಜಿಪಂ ಹಾಗೂ ಎತ್ತಿನಹೊಳೆ ಯೋಜನೆಯಡಿ ರಸ್ತೆ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು. ಯಶೋಧರಮೂರ್ತಿ, ವಿವೇಕ್, ಈರಯ್ಯ, ಪಿಡಿಒ ಅವಿನಾಶ್, ಮೂರ್ತಿ, ರಂಗಸ್ವಾಮಿ, ಕುಮಾರ್, ರಮೇಶ್, ವಿನಾಯಕ್, ಯೋಗೇಶ್ ಇತರರಿದ್ದರು.
ಬೇಲೂರು ತಾಲೂಕಿನ ಗಂಗೂರು-ಕನಕೆಮಹಳ್ಳಿ ಗ್ರಾಮದಲ್ಲಿ ಜಿಪಂ ಹಾಗೂ ಎತ್ತಿನಹೊಳೆ ಯೋಜನೆಯಡಿ ರಸ್ತೆ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು. ಯಶೋಧರಮೂರ್ತಿ, ವಿವೇಕ್, ಈರಯ್ಯ, ಪಿಡಿಒ ಅವಿನಾಶ್, ಮೂರ್ತಿ, ರಂಗಸ್ವಾಮಿ, ಕುಮಾರ್, ರಮೇಶ್, ವಿನಾಯಕ್, ಯೋಗೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್ ಹೇಳಿಕೆ
ಬೇಲೂರು: ತಾಲೂಕಿನ ಗಂಗೂರು, ಕನಕೆನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರಿಗೆ ಹಳೇಬೀಡು ಮತ್ತು ಜಾವಗಲ್-ಹುಂಡಿಗನಾಳು ಗ್ರಾಮಗಳಿಗೆ ತೆರಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಿಪಂ ಹಾಗೂ ಎತ್ತಿನಹೊಳೆ ನೀರಾವರಿ ಯೋಜನೆಯಡಿ ರಸ್ತೆ ಕಾಮಗಾರಿ ಮಾಡಿಸಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಗಂಗೂರು ಹಾಗೂ ಕನಕೆನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಎತ್ತಿನಹೊಳೆ ನೀರಾವರಿ ಯೋಜನೆಯಡಿ ರಸ್ತೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಗಂಗೂರು ಹಾಗೂ ಕನಕೆನಹಳ್ಳಿ ರಸ್ತೆ ಅಭಿವೃದ್ಧಿಗೆ 55 ಲಕ್ಷ ರೂ. ಅನುದಾನದಲ್ಲಿ ಕೆಲಸ ಮಾಡಿಸಲು ಗ್ರಾಮಸ್ಥರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿದ್ದೇವೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ಅಲ್ಲದೆ ಈ ಭಾಗದ ಗಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿಯೂ ರಸ್ತೆ ಅಭಿವೃದ್ಧಿ ಬಗ್ಗೆ ಸಾರ್ವಜನಿಕರ ಬಹು ದಿನಗಳ ಬೇಡಿಕೆ ಇತ್ತು. ಅವರ ಆಶಯದಂತೆ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿಸಲು ಕ್ರಮ ಕೈಗೊಂಡಿದ್ದು, ಇದರಿಂದ ಹಳೇಬೀಡು ಮತ್ತು ಜಾವಗಲ್-ಹುಂಡಿಗನಾಳು ಸೇರಿದಂತೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ ಎಂದರು.
ನಿವೃತ್ತ ಸೈನಿಕ ಹಾಗೂ ಜಿಪಂ ಮಾಜಿ ಸದಸ್ಯ ಯಶೋಧರಮೂರ್ತಿ, ಜಿಪಂ ಎಇಇ ವಿವೇಕ್, ಎತ್ತಿನಹೊಳೆ ನೀರಾವರಿ ವಿಭಾಗದ ಎಇಇ ಈರಯ್ಯ, ಪಿಡಿಒ ಅವಿನಾಶ್, ಗಂಗೂರು ಗ್ರಾಮಸ್ಥರಾದ ಗ್ರಾಮಸ್ಥರಾದ ಮೂರ್ತಿ, ರಂಗಸ್ವಾಮಿ, ಕುಮಾರ್, ರಮೇಶ್, ವಿನಾಯಕ್, ಯೋಗೇಶ್, ಕನಕೆನಹಳ್ಳಿ ಗ್ರಾಮದ ರಾಮು, ಪ್ರಸನ್ನ, ಶಶಿಕುಮಾರ್, ಮನು, ಹನುಮಯ್ಯ, ಸಿದ್ದರಾಮಯ್ಯ, ಚನ್ನಬಸಪ್ಪ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net