ಶಂಭುಲಿಂಗೇಶ್ವರ ಸನ್ನಿಧಿಯಲ್ಲಿ ಧಾರ್ಮಿಕ ವೈಭವ

ಶಂಭುಲಿಂಗೇಶ್ವರಸ್ವಾಮಿ  ಶ್ರಾವಣ ಸೋಮವಾರದ ಪ್ರಯುಕ್ತ ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡಿರುವ ಗಂಡಸಿ ಕ್ಷೇತ್ರನಾಥ ಶ್ರೀ  ಶಂಭುಲಿಂಗೇಶ್ವರ ಸ್ವಾಮಿ.
ಶಂಭುಲಿಂಗೇಶ್ವರಸ್ವಾಮಿ ಶ್ರಾವಣ ಸೋಮವಾರದ ಪ್ರಯುಕ್ತ ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡಿರುವ ಗಂಡಸಿ ಕ್ಷೇತ್ರನಾಥ ಶ್ರೀ ಶಂಭುಲಿಂಗೇಶ್ವರ ಸ್ವಾಮಿ.
Published on

ಪ್ರಮುಖ ಮುಖ್ಯಾಂಶಗಳು

  • ಶ್ರಾವಣ ಮಾಸದ ಸೋಮವಾರ ಪ್ರಯುಕ್ತ ವಿಶೇಷ ಪೂಜೆ

ಗಂಡಸಿ:

ತಾಲೂಕಿನ ಗಂಡಸಿ ಗ್ರಾಮದ ಕ್ಷೇತ್ರನಾಥ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಸೋಮವಾರ ಬೆಳಗ್ಗೆ 4 ಗಂಟೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿದವು.

ಉದ್ಭವಮೂರ್ತಿ ಶ್ರೀ ಶಂಭುಲಿಂಗೇಶ್ವರಸ್ವಾಮಿಗೆ ರುದ್ರಾಭಿಷೇಕ, ಸಹಸ್ರನಾಮ ಬಿಲ್ವಾರ್ಚನೆ, ಕುಂಭಾಭಿಷೇಕ, ಜಲಾಭಿಷೇಕ ನಂತರ ಶ್ರೀ ಸ್ವಾಮಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ದೇವರ ದರ್ಶನಕ್ಕೆ ಆಗಮಿಸಿದ್ದ ಕ್ತರು ಬೆಳಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ಬೇಡಿಕೊಳ್ಳುವ ಮೂಲಕ ಅರ್ಚಕರ ಬಳಿ ತೀರ್ಥ ಪ್ರಸಾದ ಸ್ವೀಕರಿಸಿದರು. ಸಾವಿರಾರು ಭಕ್ತಾದಿಗಳಿಗೆ ದೇವಾಲಯದ ಆವರಣದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಶ್ರೀ ಶಂಭುಲಿಂಗೇಶ್ವರಸ್ವಾಮಿ ಮಠದ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ದೇವಾಲಯದ ಧರ್ಮದರ್ಶಿ ಪ್ರಸನ್ನ ಕುಮಾರ್ , ದ್ಯಾವೇಗೌಡ, ಸಮಾಜ ಸೇವಕ ವಿರೂಪಾಕ್ಷಪ್ಪ, ಜಿ.ಸಿ.ನಾಗರಾಜ್, ಕುಮಾರ್, ನಾಗಭೂಷಣ್, ರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net