ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬಿಸಿಲಿನ ತಾಪಕ್ಕೆ ತರಕಾರಿ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ವ್ಯಾಪ್ತಿಯ ಬಲ್ಲನೇಹಳ್ಳಿ, ಸೀಗೆ, ಸಾಲಗಾಮೆ, ಬೀಕನಹಳ್ಳಿ, ಕೊಂಡಜ್ಜಿ ಹಾಗೂ ಕೊಂಡಜ್ಜಿಕೊಪ್ಪಲು ಗ್ರಾಮಗಳಲ್ಲಿ ಸಂಬಾರ, ಬೀನ್ಸ್, ಕೋಸು, ಟೊಮ್ಯಾಟೊ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದಿದ್ದರೂ ಮಳೆ ಕೊರತೆ ಹಾಗೂ ಬಿಸಿಲಿನ ತೀವ್ರತೆ ಕಾರಣದಿಂದ ಬೆಳೆಗಳು ಹಾನಿಗೊಳಗಾಗುತ್ತಿವೆ.